ಶನಿವಾರ, ಮಾರ್ಚ್ 6, 2021
18 °C

‘ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಅಪರಾಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಅಪರಾಧ’

ಚಿಕ್ಕಮಗಳೂರು: ಸಾರ್ವಜನಿಕ ಸ್ಥಳ­ಗಳಾದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆಗಳು, ಶಿಕ್ಷಣ ಕೇಂದ್ರ­ಗಳು, ಸಾರ್ವಜನಿಕ ಕಚೇರಿಗಳು ಹಾಗೂ ಜನನಿಬಿಡ ಮತ್ತು ನಿಷೇಧಿತ ಪ್ರದೇಶಗಳಲ್ಲಿ ಧೂಮಪಾನ ಮಾಡು­ವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶೆ ಎಚ್.ಎಸ್.­ಕಮಲ ಅವರು ತಿಳಿಸಿದರು.‘ಕೋಟ್ಪಾ’ ಕಾಯ್ದೆ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧವಿದ್ದು, ಸಾರ್ವಜ­ನಿಕರು ಈ ಬಗ್ಗೆ ಎಚ್ಚರದಿಂದಿರಬೇಕು. ಧೂಮಪಾನ ಚಟವು, ಸೇವಿಸುವವರ ಆರೋಗ್ಯ ಹಾಳು ಮಾಡುವುದರ ಜತೆಗೆ ಅಕ್ಕಪಕ್ಕದವರ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ದುಶ್ಚಟಕ್ಕೆ ಒಳಗಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಅವರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್­ಳಬೇ­ಕಾಗಿದೆ. 18 ವರ್ಷದೊಳಗಿ­ನವರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಪಿ.ಹೊನ­ಕೇರಿ ಮಾತನಾಡಿ, ಧೂಮಪಾನದ ಧೂಮದಲ್ಲಿ ಏಳು ಸಾವಿರಕ್ಕೂ ಹೆಚ್ಚು ರಾಸಾಯನಿಕಗಳಿದ್ದು, ಅವುಗಳಲ್ಲಿ 69 ರಾಸಾಯನಿಕಗಳಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದರು.ಜಿ.ಪಂ.ಸಿಇಒ ಪಿ.ಬಿ.ಕರುಣಾಕರ್ ಮಾತನಾಡಿ, ಸರ್ವ ರೋಗಕ್ಕೂ ತಂಬಾಕು ಮೂಲ ಕಾರಣ ಎಂದರು.ಜಾಗತಿಕ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ತಂಬಾಕಿನ ಚಿತ್ರಣ ಮತ್ತು ತಂಬಾಕು ಸಂಬಂಧಿಸಿದ ಕಾಯಿಲೆ­ಗಳಿಂದಾಗುವ ದುಷ್ಪರಿಣಾ­ಮಗಳ ಬಗ್ಗೆ  ಡಾ.ಶಿವದತ್ತ್ ಹಾಗೂ ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮದ ಬಗ್ಗೆ ವಕೀಲ ಡಿ.ಬಿ.­ಸುಜೇಂದ್ರ ಉಪನ್ಯಾಸ ನೀಡಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಮಂಜುನಾಥ ನಾಯಕ, ಜಿಲ್ಲಾ ಸರ್ಜನ್ ಡಾ.ದೊಡ್ಡ ಮಲ್ಲಪ್ಪ, ಚಂದ್ರಕಿರಣ್ ಮತ್ತಿತರ ಅಧಿಕಾರಿಗಳು ಇದ್ದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ವಿ.ನೀರಜ್ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಜಯಣ್ಣ    ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.