‘ಸಿಆರ್‌ಆರ್‌’ ತಗ್ಗಿಸಲು ಬ್ಯಾಂಕ್‌ಗಳ ಆಗ್ರಹ

6

‘ಸಿಆರ್‌ಆರ್‌’ ತಗ್ಗಿಸಲು ಬ್ಯಾಂಕ್‌ಗಳ ಆಗ್ರಹ

Published:
Updated:

ನವದೆಹಲಿ(ಪಿಟಿಐ): ಹಬ್ಬಗಳ ಸರಣಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಾಲದ ಬೇಡಿಕೆ ಗರಿಷ್ಠ ಮಟ್ಟದಲ್ಲಿದ್ದು, ಭಾರ­ತೀಯ ರಿಸರ್ವ್ ಬ್ಯಾಂಕ್‌ ಸೆ. 20ರಂದು ಪ್ರಕಟಿಸಲಿರುವ ಹಣಕಾಸು ನೀತಿ ತ್ರೈಮಾಸಿಕ ಪರಾಮರ್ಶೆಯಲ್ಲಿ ನಗದು ಮೀಸಲು ಅನುಪಾತ(ಸಿಆರ್‌­ಆರ್‌) ತಗ್ಗಿಸಬೇಕು ಎಂದು ಪ್ರಮುಖ ಬ್ಯಾಂಕುಗಳು ಆಗ್ರಹಿಸಿವೆ.‘ಸಿಆರ್‌ಆರ್‌’ ತಗ್ಗಿಸಲು ಈಗಾಗಲೇ ‘ಆರ್‌ಬಿಐ’ಗೆ ಮನವಿ ಮಾಡಿದ್ದೇವೆ. ‘ಎಂಎಸ್‌ಎಫ್‌’  ಮೇಲಿನ ನಿರ್ಬಂಧ  ಸಡಿಲಿ­ಸಬೇಕೆಂದೂ ಕೋರಿದ್ದೇವೆ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅಧ್ಯಕ್ಷ ಪ್ರತೀಪ್ ಚೌಧರಿ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಜುಲೈ 29ರಂದು ಪ್ರಕಟಿಸಿದ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ‘ಆರ್‌ಬಿಐ’ ರೆಪೊ ದರ ಮತ್ತು ನಗದು ಮೀಸಲು ಅನುಪಾತದಲ್ಲಿ  ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry