‘ಸಿಎ ಕೋರ್ಸ್‌ಗೆ ವಿಪುಲ ಅವಕಾಶ’

7

‘ಸಿಎ ಕೋರ್ಸ್‌ಗೆ ವಿಪುಲ ಅವಕಾಶ’

Published:
Updated:

ಉಡುಪಿ: `ಲೆಕ್ಕಪರಿಶೋಧಕ (ಸಿ.ಎ) ಕೋರ್ಸ್‌ಗೆ ವಿಪುಲ ಉದ್ಯೋಗ ಅವ ಕಾಶಗಳಿದ್ದು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು' ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಉಡುಪಿ ಶಾಖೆಯ ಅಧ್ಯಕ್ಷ ಮುರಳೀಧರ ಕಿಣಿ ಹೇಳಿದರು.ಕುಂಜಿಬೆಟ್ಟು ಉಪೇಂದ್ರ ಪೈ ಸ್ಮಾಕರ ಕಾಲೇಜಿನ ವೃತ್ತಿ ಮಾರ್ಗದರ್ಶನ ಸಂಘವು ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ಸಿಎ ಕೋರ್ಸ್' ವಿಷಯ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಿ.ಎ ಪಠ್ಯಕ್ರಮಗಳು, ಪರೀಕ್ಷಾ ವಿಧಿ ವಿಧಾನಗಳು, ಪರೀಕ್ಷಾ ಕೇಂದ್ರಗಳು, ಪರೀಕ್ಷಾ ಸಮಯದ ಮಾಹಿತಿ ಎಲ್ಲರಿಗೂ ಲಭ್ಯವಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಸಾಕಷ್ಟು ಸೌಕರ್ಯಗಳಿದ್ದು, ಸಮ ರ್ಪಣಾ ಮನೋಭಾವದಿಂದ ಅಧ್ಯ ಯನ ನಡೆಸಿದರೆ ಯಶಸ್ಸು ಗಳಿಸಬಹುದು ಎಂದರು.ಸಿಪಿಟಿ ಹಾಗೂ ಐಪಿಸಿಸಿ ಮಾರ್ಗ ಗಳಿಂದ ಸಿಎ ಕಲಿಯುವ ವಿಧಾನ ಮತ್ತು ಅದಕ್ಕೆ ಬೇಕಾದ ಪೂರ್ವ ತಯಾರಿ ಸಿದ್ಧತೆ ತರಬೇತಿ ಬಗ್ಗೆ ಅವರು ಮಾಹಿತಿ ನೀಡಿದರು.  ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ ಭಟ್ ಅಧ್ಯಕ್ಷತೆ ವಹಿಸಿದ್ದರು. ವೃತ್ತಿ ಮಾರ್ಗದರ್ಶನ ಸಂಘದ ಅಧ್ಯಾಪಕ ಸಲಹೆಗಾರ ಜಾವೆದ್ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry