‘ಸಿದ್ದರಾಮ ವಿಭೂತಿ ಪುರುಷ’

7

‘ಸಿದ್ದರಾಮ ವಿಭೂತಿ ಪುರುಷ’

Published:
Updated:

ತುಮಕೂರು: ಸಿದ್ದರಾಮ ದೈವತ್ವ­ಕ್ಕೇರಿದ ವಿಭೂತಿ ಪುರುಷ. ಕಲ್ಯಾಣದ ಶರಣರ ಪ್ರಭಾವದಿಂದಾಗಿ ಕರ್ಮ­ಯೋಗದಿಂದ ಶಿವಯೋಗದತ್ತ ಹೊರಳಿ ಮಹಾಯೋಗಿ ಎನಿಸಿ­ಕೊಂಡ­ರು ಎಂದು ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ಹೇಳಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್‌, ಬಸವ ಕೇಂದ್ರದ ವತಿಯಿಂದ ಜಯ­ದೇವ ಹಾಸ್ಟೆಲ್‌ನಲ್ಲಿ ಈಚೆಗೆ ನಡೆದ ಗಂಗಮ್ಮ ಮಧೂಡಯ್ಯ ದತ್ತಿ ಕಾರ್ಯ­ಕ್ರಮದಲ್ಲಿ ಉಪನ್ಯಾಸ ನೀಡಿ, ಸಿದ್ದರಾಮ ದೀನದಲಿತರಿಗಾಗಿ ಕೈಗೊಂ­ಡಿದ್ದ ಸಮಾಜ ಕಲ್ಯಾಣ ಕಾರ್ಯ ಅಲ್ಲಮನಂತಹ ಜ್ಞಾನ ಸದೃಶ ವ್ಯಕ್ತಿಯನ್ನು ಸೆಳೆಯಿತು ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಡಿ.ಎನ್.ಯೋಗೀಶ್ ಮಾತ­ನಾಡಿ, ನಾಡಿನ ಚರಿತ್ರೆಯಲ್ಲೇ ನಿರ್ವಿಕಲ್ಪ ಸಮಾಧಿ ಮಾಡಿಕೊಂಡ ಮೊಟ್ಟಮೊದಲ ವ್ಯಕ್ತಿ ಸಿದ್ದರಾಮ. ಬಹುಪಾಲು ವಚನಗಳು ಗುರುಲಿಂಗ ಜಂಗಮದ ಸತ್ವವನ್ನು ಮೆರೆಯುತ್ತವೆ ಎಂದರು.ಬಸವಕೇಂದ್ರದ ಅಧ್ಯಕ್ಷೆ ಸಿದ್ದ­ಗಂಗಮ್ಮ, ಶರಣೆ ಅಕ್ಕನಾಗಮ್ಮ, ದತ್ತಿ ದಾನಿ ಜಿ.ಎಸ್.ಮಧೂಡಯ್ಯ, ಗಂಗಮ್ಮ ಉಪಸ್ಥಿತರಿದ್ದರು. ಚಿಕ್ಕ­ಬೆಳ್ಳಾವಿ ಶಿವಕುಮಾರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry