ಮಂಗಳವಾರ, ಜೂನ್ 22, 2021
22 °C
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ

‘ಸುಪ್ರೀಂ’ ಕದ ತಟ್ಟಿದ ‘ತಪ್ಪಿತಸ್ಥರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಚಾರಣಾಧೀನ ನ್ಯಾಯಾಲಯ ನೀಡಿದ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿರುವ ದೆಹಲಿ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ತಪ್ಪಿತಸ್ಥರು ಶನಿವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ನಿತ್ಯ ವಿಚಾರಣೆಯ ನೆಪದಲ್ಲಿ ನಮಗೆ ನ್ಯಾಯಯುತ ವಿಚಾರಣೆ ನಿರಾಕರಿಸಲಾಗಿದೆ. ಕಿರುಕುಳ ನೀಡಿದ್ದರಿಂದ ಪ್ರಾಸಿಕ್ಯೂಷನ್‌ ಕಟ್ಟಿದ ಕಲ್ಪಿತ ಹಾಗೂ ಸತ್ಯಕ್ಕೆ ವಿರುದ್ಧವಾದ ಕಥೆಯನ್ನು ಒಪ್ಪಿಕೊಳ್ಳುವಂತೆ  ಬಲವಂತಪಡಿಸಲಾಯಿತು’ ಎಂದು ಅಪರಾಧಿಗಳಾದ ಮುಖೇಶ್ ಹಾಗೂ ಪವನ್ ಗುಪ್ತಾ ವಾದಿಸಿದ್ದಾರೆ.

‘ನಿಮ್ಮ ಭೀಕರ ಕೃತ್ಯ ಕ್ಷಮೆಗೆ ಅರ್ಹವಲ್ಲ ಹಾಗೂ ಅಂತಹ ನೀಚ ನಡವಳಿಕೆಗೆ ಸಮಾಜ ಮೂಕಪ್ರೇಕ್ಷಕವಾಗಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದ ದೆಹಲಿ ಹೈಕೋರ್ಟ್‌, ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ತಪ್ಪಿತಸ್ಥರ ಮರಣದಂಡನೆಯನ್ನು ಎತ್ತಿಹಿಡಿದು ಗುರುವಾರ ತೀರ್ಪು ನೀಡಿತ್ತು.

ಅಲ್ಲದೇ, ವಿಚಾರಣಾಧೀನ ನ್ಯಾಯಾಲಯವು 2013ರ ಸೆಪ್ಟಂಬರ್‌ 13 ರಂದು ನೀಡಿದ್ದ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ನಾಲ್ವರು ತಪ್ಪಿತಸ್ಥರಾದ ಮುಖೇಶ್‌ (26), ಅಕ್ಷಯ್‌ ಠಾಕೂರ್‌ (28), ಪವನ್‌ ಗುಪ್ತಾ (19) ಹಾಗೂ ವಿನಯ್‌ ಶರ್ಮಾ (20) ಸಲ್ಲಿಸಿದ್ದ  ಮನವಿಯನ್ನು ನ್ಯಾಯಮೂರ್ತಿಗಳಾದ  ರೇವಾ ಖೇತ್ರಪಾಲ್ ಮತ್ತು ಪ್ರತಿಭಾ ರಾಣಿ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.