ಗುರುವಾರ , ಫೆಬ್ರವರಿ 25, 2021
23 °C

‘ಸುರಪುರ ಸಂಸ್ಥಾನದಿಂದ ತಿರುಪತಿಗೆ ಕಂದಾಯ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸುರಪುರ ಸಂಸ್ಥಾನದಿಂದ ತಿರುಪತಿಗೆ ಕಂದಾಯ’

ಶಹಾಪುರ: ತಿರುಪತಿ  ದೇವಸ್ಥಾನದಲ್ಲಿ ಪೂಜೆ ಕೈಂಕರ್ಯಗಳನ್ನು ನಡೆಸಲು, ಉತ್ಸವ ನಿರಂತರವಾಗಿ ಸಾಗಲಿ ಎನ್ನುವ ಉದ್ದೇಶದಿಂದ ಸುರಪುರ ಸಂಸ್ಥಾನದ ರಾಜರು ತಾಲ್ಲೂಕಿನ ಐಕೂರ ಗ್ರಾಮದ ಜಮೀನಿನ ಭೂ ಕಂದಾಯ­ವನ್ನು ತಿರುಪತಿಗೆ ಸಲ್ಲಿಸುತ್ತಿ­ದ್ದರು.ಅದೇ ಸಂಪ್ರದಾಯ­ವನ್ನು ವಂಶ­ಸ್ಥರು  ಇಂದಿಗೂ ಮುಂದು­ವರೆ­­ಸಿ­ಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಷಯ ಎಂದು ಇತಿಹಾಸ­ಕಾರ ಭಾಸ್ಕರರಾವ ಮುಡಬೂಳ ಹೇಳಿದರು.ಪಟ್ಟಣದ ಜೀವ್ಹೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ ಭೀಮರಾಯನಗುಡಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ‘1857 ಸ್ವಾತಂತ್ರ್ಯ ಸಂಗ್ರಾಮದ  ವಿಜಯ ಸ್ಫೂರ್ತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಬ್ರಿಟಿಷ್‌ರ ಹಾಗೂ ನಿಜಾಮರ ಆಳ್ವಿಕೆಯ ನಡುವೆ ದಿಟ್ಟತನ್ನದಿಂದಲೆ ತನ್ನ ದೇಶದ ನೆಲವನ್ನು ಕಾಪಾಡಿದ ಶ್ರೇಯಸ್ಸು ರಾಜಾ ವೆಂಕಟಪ್ಪ ನಾಯಕರಿಗೆ ಸಲ್ಲುತ್ತದೆ. ಇತಿಹಾಸದ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪ್ರಚುರ ಪಡಿಸಿ ಯುವಕರಲ್ಲಿ ದೇಶಾಭಿಮಾನ ಮೂಡಿಸುವುದು ಅಗತ್ಯವಾಗಿದೆ’ ಎಂದು ಹೇಳಿದರು.ಸುರಪುರ  ಸಂಸ್ಥಾನದ ವಂಶಸ್ಥ ರಾಜಾ ವೆಂಕಟಪ್ಪ ನಾಯಕ(ತಾತ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಪತ್ರಕರ್ತ ಡಾ.ಶ್ರೀನಿವಾಸ ಸಿರನೂರಕರ್‌, ಚಿತ್ರಕಲಾವಿದ ವಿಜಯ ಹಾಗರಗುಂಡಗಿ ಇದ್ದರು. ಇದೇ ಸಂದರ್ಭದಲ್ಲಿ ಗುಲ್ಬರ್ಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ರೌಡಿಯನ್ನು ಮಟ್ಟ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಎಸ್‌ಐ  ಉದಂಡಪ್ಪ ಅವರನ್ನು ಸನ್ಮಾನಿಸಲಾಯಿತು.ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಕೃಷ್ಣಾ ಸುಬೇದಾರ, ಎಪಿಎಂಸಿ ಅಧ್ಯಕ್ಷ ತಿಮ್ಮಣ್ಣ­ರಾಂಪೂರಕರ್, ಯಲ್ಲಯ್ಯ ನಾಯಕ, ರಾಮ­ಚಂದ್ರ ಕಾಶಿರಾಜ, ಈರಣ್ಣ ಇಜೇರಿ, ಹಣಮಂತ­ರಾಯ, ರಾಜಗೋಪಾಲ, ಲಿಂಗಣ್ಣಗೌಡ ದೇಸಾಯಿ ಹದನೂರ, ದೇವು ಹೆಬ್ಬಾಳ, ಹಣಮಂತ­ರಾಯ ಮೇಸ್ತ್ರಿ, ಮಾನಪ್ಪ ಹಡಪದ, ಪಾಂಡುರಂಗ ಚಿನ್ನಾಕರ, ಆರ್‌.ಚೆನ್ನಬಸು ವನದುರ್ಗ, ಬಂಡೆಪ್ಪ ದೊರೆ, ಶರಣಪ್ಪ ಹವಾಲ್ದಾರ, ಇಕ್ಬಾಲರಾಹಿ ತಿಮ್ಮಾಪುರಿ, ವಾಲ್ಮೀಕಿ ಕೊಳ್ಳೂರ,ಅಂಬರೇಶ ಇಟಗಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.