‘ಸೇವಾ ಕಾರ್ಯದೊಂದಿಗೆ ಜಗತ್ತಿಗೆ ಒಳಿತು ಮಾಡಿ’

ದೊಡ್ಡಬಳ್ಳಾಪುರ: ನಮ್ಮ ಸಂಸ್ಕೃತಿ ಪರಂಪರೆಗಳ ಉಳಿವಿಗೆ ಸಾಂಸ್ಕೃತಿಕ ಸಂವೇದನೆ ಅಗತ್ಯ ಎಂದು ದತ್ತಾತ್ರೇಯ ಆಶ್ರಮದ ಆನಂದ ಭಾರತಿ ಸ್ವಾಮೀಜಿ ಹೇಳಿದರು.
ತಾಲ್ಲೂಕು ಕಲಾವಿದರ ಸಂಘದ ವತಿಯಿಂದ ಕಲಾವಿದ ದಿ.ಕಾರನಾಳ ಅಶ್ವತ್ಥಪ್ಪನವರ ಸ್ಮರಣಾರ್ಥ ನಗರದ ಪುರವನದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಜನ್ಮ ಶ್ರೇಷ್ಟ.ಸತ್ಕಾರ್ಯ, ಸೇವಾ ಕಾರ್ಯಗಳೊಂದಿಗೆ ಜಗತ್ತಿಗೆ ಒಳಿತನ್ನು ಮಾಡುವ ಮೂಲಕ ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ರಂಗಭೂಮಿ ಕಲಾವಿದರ ಪರಿಸ್ಥಿತಿ ಶೋಚನೀಯವಾಗಿದೆ.ಸರ್ಕಾರದಲ್ಲಿ ಅವರಿಗೆ ಸೂಕ್ತ ಸೌಲಭ್ಯಗಳು ದೊರೆಯಬೇಕಿವೆ ಎಂದರು.
ಕಲಾವಿದರ ಸಂಘದ ಅಧ್ಯಕ್ಷ ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ದಿ.ಕಾರನಾಳ ಅಶ್ವತ್ಥಪ್ಪನವರ ಪತ್ನಿ ಚೆನ್ನಮ್ಮ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌ.ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷೆ ಶಂಷುನ್ನೀಸಾ, ಉಪಾಧ್ಯಕ್ಷೆ ಮಂಜುಳಾ ಆಂಜನೇಯ,ರಾಂಪುರ ಪ್ರಭುದೇವ್, ಕಸಾಪ ನಿಕಟಪೂರ್ವ ಅಧ್ಯಕ್ಷ ಡಿ.ಶ್ರೀಕಾಂತ, ತಾಲ್ಲೂಕು ಕಲಾವಿದರ ಸಂಘದ ಗೌರವ ಅಧ್ಯಕ್ಷ ಗುರುಮಲ್ಲಯ್ಯ, ಉಪಾಧ್ಯಕ್ಷ ವೆಂಕಟರಾಜು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಎನ್.ವೆಂಕಟೇಶ್, ಮುನಿರಾಜು, ರಾಮಾಂಜಿನಪ್ಪ, ವೀರೇಗೌಡ, ಮುನಿಪಾಪಯ್ಯ, ತಿಮ್ಮಯ್ಯದಾಸರು ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.