‘ಸ್ತ್ರೀ ಸಬಲೀಕರಣ ಅಗತ್ಯ’

7

‘ಸ್ತ್ರೀ ಸಬಲೀಕರಣ ಅಗತ್ಯ’

Published:
Updated:

ಭಾಲ್ಕಿ: ಸಾಮಾಜಿಕ, ಆರ್ಥಿಕ, ರಾಜ­ಕೀಯ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಮಹಿಳೆಯರ ಪ್ರಗತಿ ಅಗತ್ಯ ಎಂದು ಪಂಚಶೀಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲ್.ಜಿ.ಗುಪ್ತಾ ಅಭಿಪ್ರಾಯಪಟ್ಟರು.ಪಟ್ಟಣದ ಎಂ.ಆರ್.ಎ. ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಸಾವಿತ್ರಿಬಾ ಫುಲೆ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು,  ಫುಲೆ ಮಹಿಳೆಯರ ಶಿಕ್ಷಣ­ಕ್ಕಾಗಿ ಹಗಲಿರಳು ದುಡಿದು, ಅವರ ಏಳಿಗೆಗಾಗಿ ಸಮಾಜದಲ್ಲಿ ಸಮಪಾಲು ತಂದುಕೊಟ್ಟರು ಎಂದರು.ಪ್ರಾಚಾರ್ಯರಾದ ಆರ್.ಪಿ. ಮೋರೆ ಸಾವಿತ್ರಿಬಾ ಫುಲೆ ಅವರ ಜೀವನ ಕುರಿತು ಮಾತನಾಡಿದರು. ಪ್ರಮುಖರಾದ ಸಿ.ಬಿ. ಮಹಾಗಾವೆ, ಎಂ.ಆರ್. ಸೂರ್ಯವಂಶಿ, ಕೆ.ಎಂ.­ಬಾಜೋಳಗೆ ಇತರರು ಉಪಸ್ಥಿತರಿದ್ದರು.ಸಂಗೀತಾ, ಶಾಂತಮ್ಮಾ ಸ್ವಾಗತಿಸಿ­ದರು. ಪೂಜಾ ನಿರೂಪಿಸಿದರು. ಜ್ಯೋತಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry