‘ಸ್ಮಾರ್ಟ್‌’ ಸರ್ಕಾರಿ ಶಾಲೆ!

7
ಶೈಕ್ಷಣಿಕ ಅಂಗಳ

‘ಸ್ಮಾರ್ಟ್‌’ ಸರ್ಕಾರಿ ಶಾಲೆ!

Published:
Updated:

ಗುರುಮಠಕಲ್‌:: : ಇಂದಿನ ಅಧುನಿಕ ಯುಗದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಶೈಕ್ಷಣಿಕ ಕ್ಷೇತ್ರದಲ್ಲೂ ಅದರ ಬಳಕೆ ಹೆಚ್ಚಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಶಾಲೆಯ ಸ್ಮಾರ್ಟ್‌ ತರಗತಿ ಮೂಲಕ ಮಕ್ಕಳು ಮತ್ತು ಪೋಷಕರನ್ನು ಆಕರ್ಷಿಸಲು ಇಂತಹ ಸಂಸ್ಥೆಗಳು ಪ್ರಯತ್ನಿಸುತ್ತವೆ.ಆದರೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸರ್ಕಾರಿ ಶಾಲೆಯಲ್ಲೂ ಇಂತಹ ಪ್ರಯತ್ನ ನಡೆಸಿರುವುದು ಗಮನ ಸೆಳೆಯುತ್ತಿದೆ.

ಪಟ್ಟಣದ ಬಾಲಕಿಯರ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ  ಇಂತಹ ಸ್ಮಾರ್ಟ್‌ ಕ್ಲಾಸ್‌ನ್ನು ಈ ವರ್ಷದ ಜೂನ್‌ ತಿಂಗಳಿಂದಲೆ ಆರಂಭಿಸಲಾ­ಗಿದೆ. ಶಾಲೆಯ ಮುಖ್ಯಗುರು ಹಣ­ಮಂತ್ರಾವ್‌ ಗೋಂಗ್ಲೆ ಅವರ ಆಸಕ್ತಿ  ಹಾಗೂ ಸಿಬ್ಬಂದಿ ಮತ್ತು ಎಸ್‌ಡಿಎಂಸಿ ಸಹಕಾರದಿಂದ ಇದು ಸಾಧ್ಯವಾಗಿದೆ.ಈ ಶಾಲೆಯಲ್ಲಿ  ಮುಂದುವರಿದ ತಂತ್ರಜ್ಞಾನವಾದ ಅಲ್ಟ್ರಾ ಶಾರ್ಟ್‌ ಥೋ್ರ ಪ್ರೊಜೆಕ್ಟರ್‌ ಅಳವಡಿಸಲಾಗಿದೆ. ಇದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ. ಅದಲ್ಲದೆ ಇನ್ನುಳಿದ ಸಾಮಗ್ರಿಗಳನ್ನು ಬೆಂಗಳೂರು ಮತ್ತು ಹೈದರಾಬಾದ್‌ನಿಂದ ತಂದು ಅಳವಡಿಸಲಾಗಿದೆ.ಸಾಮಗ್ರಿಗಳ ಅಳವಡಿಕೆಗಾಗಿ ಬೇಕಾ­ದ ಹಣವನ್ನು ದಾನಿಗಳಿಂದ ಸಂಗ್ರ­ಹಿ­ಸಲಾಗಿದೆ. ಅಲ್ಪಸಂಖ್ಯಾತ ವಿದ್ಯಾ­ರ್ಥಿ­ನಿಯರು ಓದಿನ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸಲಿ ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಇದನ್ನು ರೂಪಿಸ­ಲಾಗಿದೆ. ಈ ಅತ್ಯಾ­ಧುನಿಕ ತಂತ್ರ­ಜ್ಞಾನದ ಅಳವಡಿಕೆಗೆ ಒಟ್ಟು 2.25 ಲಕ್ಷ ರೂಪಾಯಿ ಖರ್ಚಾಗಿದೆ. ಹಣದ ಸಂಗ್ರಹಣೆಯನ್ನು ಕೇವಲ ಎರಡು ಮೂರು ತಿಂಗಳಲ್ಲಿ ಮಾಡಲಾಗಿದೆ. ಹಣ ಸಂಗ್ರಹಣೆ ಮತ್ತು ಇತರ ಕೆಲಸಗಳಿಗೆ ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ್ ಸೈಯದುದ್ದಿನ್‌, ವಿಜ್ಞಾನ ಶಿಕ್ಷಕ ಜಾಹಿರೋದ್ದಿನ್‌ ಬೆನ್ನೆಲುಬಾಗಿ ನಿಂತಿದ್ದಾರೆ.8ರಿಂದ 10ನೇ ತರಗತಿ ವರೆಗೆ ಒಟ್ಟು 144 ವಿದ್ಯಾರ್ಥಿಗಳಿದ್ದು, ಎಂಟು ಜನ ಶಿಕ್ಷಕರಿದ್ದಾರೆ, ಸ್ಮಾರ್ಟ್‌ ತರಗತಿಗೆ ಏಳು ಅವಧಿಗಳನ್ನು ಬಿಡದೆ ಸತತವಾಗಿ ಮೂರು ತರಗತಿಯ ವಿದ್ಯಾರ್ಥಿಗಳ ವೇಳಾಪಟ್ಟಿ ಸಿದ್ದಪಡಿಸಿ ತರಗತಿ ನಡೆಸಲಾಗುತ್ತಿದೆ. ಪಠ್ಯ ಆಧರಿಸಿದ ಸುಮಾರು 3.5 ಸಾವಿರ ಕಡತಗಳನ್ನು ಸಂಗ್ರಹಿಸಲಾಗಿದೆ.ಎಲ್ಲಾ ಶಿಕ್ಷಕರು ತರಬೇತಿ ಪಡೆದುಕೊಂಡಿದ್ದಾರೆ. ತರಗತಿ ವೇಳೆ ಕಂಪ್ಯೂಟರ್‌ ಹತ್ತಿರ ತೆರಳುವ ಅಗತ್ಯ­ವಿಲ್ಲ, ಎಲ್ಲವು ಟಚ್‌ ಸ್ಕೀನ್‌, ಪರದೆ­ಯಲ್ಲಿಯೇ ಯಾವ ರೀತಿ ಬೇಕಾದರು ಬರೆಯಬಹುದು ಮತ್ತು ವಿಭಿನ್ನ ಭಾಗಗಳನ್ನು ಗುರುತಿಸಿ ಮಲ್ಟಿಮೀಡಿ­ಯಾ ಚಿತ್ರಗಳನ್ನು ಮತ್ತು ವೀಡಿಯೊ­ಗಳನ್ನು ನೋಡುವುದು ಬಲು ಸರಳವಾ­ಗಿದೆ. ಸ್ಮಾರ್ಟ್‌ ತರಗತಿಗೆ ಪ್ರವೇಶಿಸಿದರೆ ಸಾಕು ಅದೊಂದು ಸರ್ಕಾರಿ ಶಾಲೆ ಎಂಬುದನ್ನೇ ಮರೆಯುತ್ತೇವೆ.ಈ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯನ್ನು ವೀಕ್ಷಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಂದ ಹಿಡಿದು ಎಲ್ಲಾ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry