‘ಸ್ವಾವಲಂಬನೆಗೆ ಸಂಘವೇ ಬೆನ್ನೆಲುಬು’

7
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಶಾಸಕ ಅಪ್ಪಾಜಿ ಶ್ಲಾಘನೆ

‘ಸ್ವಾವಲಂಬನೆಗೆ ಸಂಘವೇ ಬೆನ್ನೆಲುಬು’

Published:
Updated:

ಭದ್ರಾವತಿ:   ‘ಈ ಹಿಂದೆ ಹೆಣ್ಣು ಇಷ್ಟರ ಮಟ್ಟಿಗೆ ಸ್ವಾತಂತ್ರ್ಯ ಪಡೆದಿರಲಿಲ್ಲ. ಈಗ ಆಕೆ ಸ್ವಾವಲಂಬಿ ಬದುಕು ನಡೆಸುವ ಮಟ್ಟಿಗೆ ಬೆಳೆದಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಇಂಥ ಸ್ವಸಹಾಯ ಸಂಘಗಳ ಮಾರ್ಗದರ್ಶನ ಕಾರಣವಾಗಿದೆ’ ಎಂದು ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು.ಇಲ್ಲಿನ ವೀರಶೈವ ಸಭಾ ಭವನದಲ್ಲಿ ಭಾನುವಾರ ಜೇಡಿಕಟ್ಟೆ, ಕಡದಕಟ್ಟೆ ಗ್ರಾಮ ಒಕ್ಕೂಟದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟದ ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.   ನಾಯಕತ್ವ ಗುಣವನ್ನು ಹೆಚ್ಚು ಬೆಳೆಸಿಕೊಳ್ಳಲು, ಯಾರ ಅವಲಂಬನೆ ಇಲ್ಲದೆಯೂ ಬದುಕು ನಡೆಸುವ ಛಾತಿ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಕಾರಣವಾಗಿದೆ ಎಂದರು.  ಯೋಜನಾಧಿಕಾರಿ ಎಂ. ದಿನೇಶ್‌ ಮಾತನಾಡಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಧರ್ಮಸ್ಥಳ ಯೋಜನೆಯಿಂದ ಉಪಯುಕ್ತ ಕೊಡುಗೆ ಸಿಕ್ಕಿದೆ. ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಸಾಧಿಸಿ ಎಂದರು. ನಗರಸಭಾ ಸದಸ್ಯೆ ಭಾಗ್ಯ, ಶಿವರಾಮನಗರ ಒಕ್ಕೂಟ ಅಧ್ಯಕ್ಷೆ ರೇಖಾಸಿಂಗ್, ಗಂಗಮ್ಮ, ಪಾರ್ವತಮ್ಮ, ರುಕ್ಮಿಣಿ ಉಪಸ್ಥಿತರಿದ್ದರು. ನಾಗಮ್ಮ, ಶಾರದಮ್ಮ ಪ್ರಾರ್ಥಿಸಿದರು, ರೂಪಾ ಸ್ವಾಗತಿಸಿದರು, ಶೃತಿ ನಿರೂಪಿಸಿದರು, ಕವಿತಾ ವರದಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry