‘ಹಾಲು ಒಕ್ಕೂಟದ ಸಾಧನೆ ಅನನ್ಯ’

7

‘ಹಾಲು ಒಕ್ಕೂಟದ ಸಾಧನೆ ಅನನ್ಯ’

Published:
Updated:

ದೊಡ್ಡಬಳ್ಳಾಪುರ: ‘ಗುಜರಾತ್‌ನ ಅಮೂಲ್‌ಗಿಂತಲೂ ಬೆಂಗಳೂರು ಹಾಲು ಒಕ್ಕೂಟವು ಎಲ್ಲ ರೀತಿಯಲ್ಲೂ ಅಭಿವೃದ್ಧಿ ಸಾಧಿಸಿದೆ’ ಎಂದು ಬೆಂಗಳೂರು ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಡಾ.ಎನ್‌. ಕೃಷ್ಣಾರೆಡ್ಡಿ ಹೇಳಿದರು.ನಗರದ ಬೆಸೆಂಟ್‌ ಪಾರ್ಕ್‌ನಲ್ಲಿ ಬುಧವಾರ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶುದ್ಧ ಹಾಲಿಗೆ ಮಾತ್ರ ಇವತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಈ ನಿಟ್ಟಿನಲ್ಲಿ  ಹಾಲು ಉತ್ಪಾದಕರ ಸಹಕಾರ ಸಂಘಗಳು ಬ್ಯಾಕ್ಟೀರಿಯ ಮುಕ್ತ ಹಾಲು ಸಂಗ್ರಹದ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಆಗ ಮಾತ್ರ ಗ್ರಾಹಕರಿಗೆ ಒಕ್ಕೂಟ ಗುಣಮಟ್ಟದ ಹಾಲು ಸರಬರಾಜು ಮಾಡಲು ಸಾಧ್ಯ. ಹಾಲು ಕಳಪೆಯೆಂದು ಕಂಡು ಬಂದರೆ ಅಧಿಕಾರಿಗಳು ದಂಡ  ವಿಧಿಸಲಿದ್ದಾರೆ ಎಂದು ಎಚ್ಚರಿಸಿದರು.   ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ಮಂಜುನಾಥ್‌ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಖಾಸಗಿ ಲೆಕ್ಕಪರಿ ಶೋಧಕರಿಂದ ವಾರ್ಷಿಕ ಅಡಿಟ್‌ ಮಾಡಿಸುವುದು ಸಂಘಗಳಿಗೆ ಹೊರೆ ಯಾಗುತ್ತಿದೆ. ಈ ಹಿಂದಿನ ಪದ್ಧತಿ ಯಂತೆಯೇ ಸಹಕಾರ ಇಲಾಖೆ ಯಿಂದಲೇ ಅಡಿಟ್‌ ಮಾಡಿ ಸಲು ಅವಕಾಶ ಕಲ್ಪಿಸುವಂತೆ  ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸ ಲಾಗುವುದು ಎಂದರು.ಈ ವಷರ್ದಿಂದ ಸಹಕಾರ ಸಂಘಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಅಯೋಗವೇ ನಡೆಸುತ್ತಿರುವ ಹಿನ್ನೆಲೆ ಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಇದನ್ನು ತಪ್ಪಿಸಲು ಚುನಾವಣಾ ವೆಚ್ಚ ನಿಗದಿಪಡಿಸುವಂತೆ ಕೋರಲಾಗುವುದು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ನಿರ್ದೇಶಕ ಎನ್‌.ಹನು ಮಂತೇಗೌಡ ಮಾತನಾಡಿ,

ಒಕ್ಕೂಟದ ನಿರ್ದೇಶಕರ ಆಯ್ಕೆಗೂ ಸಹ ಮತ ಚಲಾಯಿಸುವ ಹಕ್ಕು ಇರುವುದಿಲ್ಲ. ಒಕ್ಕೂಟದ ನಿರ್ದೇಶಕರ ಆಯ್ಕೆಗೆ ಮತ ಚಲಾಯಿಸುವ ಸಂಘದ ನಿರ್ದೇಶಕ ಕನಿಷ್ಟ ೧೮೦ ದಿನ ಹಾಲು ಸರಬರಾಜು ಮಾಡಿರಲೇ ಬೇಕು ಎನ್ನುವ ಹೊಸ ತಿದ್ದುಪಡಿಗಳು ಜಾರಿಗೆ ಬರುತ್ತಿವೆ  ಎಂದು ಹೇಳಿದರು.ಸಭೆಯಲ್ಲಿ ದೊಡ್ಡಬಳ್ಳಾಪುರ ಹಾಲು ಶೀತಲೀಕರಣ ಘಟಕದ ಉಪ ವ್ಯವಸ್ಥಾಪಕ ಡಾ.ಎಸ್.ನರಸಿಂಹನ್, ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ವೆಂಕಟರಮಣಪ್ಪ, ಒಕ್ಕೂಟದ ಮಾಜಿ ಅಧ್ಯಕ್ಷ ದಿಬ್ಬೂರು ಜಯಣ್ಣ, ನೌಕರರ ಒಕ್ಕೂಟದ ತಾಲ್ಲೂಕು ಉಪಾಧ್ಯಕ್ಷ ಎಸ್.ರಾಜ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ನಾರಾಯಣಪ್ಪ, ಖಜಾಂಚಿ ಬಿ.ರವೀಂದ್ರಕುಮಾರ್, ಸಂಘಟನಾ ಕಾರ್ಯದರ್ಶಿ ಆರ್. ಸತೀಶ್ ಹಾಗೂ ಒಕ್ಕೂಟದ ಅಧಿ

ಕಾರಿಗಳು ಹಾಜರಿದ್ದರು.ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಕೀರ್ತಿಗೆ ತಾಲ್ಲೂಕಿನ ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಭಾಜನಾಗಿದೆ. ಈ ಸಂಘದಲ್ಲಿ ಮಾಜಿ ಕೇಂದ್ರ ಸಚಿವ ಆರ್‌.ಎಲ್‌.ಜಾಲಪ್ಪ ಅವರು ಸದಸ್ಯ ರಾಗಿದ್ದು ಅವರಿಗೆ ಬಹುಮಾನ ಬಂದಿರುವ ಹಿನ್ನೆಲೆಯಲ್ಲಿ ಪ್ರಶಸ್ತಿಯ ಚೆಕ್‌ ಅನ್ನು ಜಾಲಪ್ಪ ಅವರ ಮೊಮ್ಮಗ ರಾಕೇಶ್‌ ಸ್ವೀಕರಿಸಿದರು.ತೂಬಗೆರೆ, ದೊಡ್ಡರಾಯಪ್ಪನಹಳ್ಳಿ, ಗುಂಡಮಗೆರೆ ಹೊಸಹಳ್ಳಿ ಸಂಘಗಳು ಉತ್ತಮ ಸಂಘ ಪ್ರಶಸ್ತಿ ಹಾಗೂ ರಾಸುಗಳಿಗೆ ಕೃತಕ ಗರ್ಭಧಾರಣೆಯಲ್ಲಿ ಕೊಡಿಗೇಹಳ್ಳಿ ಎಂಪಿಸಿಎಸ್‌ ಕಾರ್ಯ ದರ್ಶಿ ಮುನೇಗೌಡ, ಕರನಾಳ ಎಂಪಿಸಿಎಸ್‌ ಕಾರ್ಯದರ್ಶಿ ಕೆ.ಎನ್‌. ಶ್ರೀನಿವಾಸ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry