‘ಹಿಂದಿ 180 ಕೋಟಿ ಜನರ ಮಾತೃಭಾಷೆ’

7

‘ಹಿಂದಿ 180 ಕೋಟಿ ಜನರ ಮಾತೃಭಾಷೆ’

Published:
Updated:

ಕಾರವಾರ: ‘ಹಿಂದಿ ಭಾಷೆ ವಿಶ್ವ ದಾದ್ಯಂತ ತನ್ನದೇ ಆದ ಸ್ಥಾನಮಾನ ಪಡೆದುಕೊಂಡಿದೆ. ಹಿಂದಿ 180 ಕೋಟಿ ಜನರ ಮಾತೃ ಭಾಷೆಯಾ ಗಿದ್ದು, 300 ಕೋಟಿ ಜನರ ದ್ವಿತೀಯ ಭಾಷೆಯಾಗಿದೆ’ ಎಂದು ಸಿಂಡಿಕೇಟ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ವಿನಾಯಕ ಕಾಮತ್ ಹೇಳಿದರು.ಕಾರವಾರ ತಾಲ್ಲೂಕಿನ ಬಾಡ ಶಿವಾಜಿ ಬಾಲಮಂದಿರದಲ್ಲಿ ನೆಹರು ಯುವಕ ಕೇಂದ್ರ, ಕೀಡಾ ಇಲಾಖೆ ಹಾಗೂ ಅಝಾದ್ ಯೂತ್ ಕ್ಲಬ್ ವತಿಯಿಂದ ಶನಿವಾರ ಆಯೋಜಿಸಿದ್ದ ಹಿಂದಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಹಿಂದಿ ಭಾಷೆಯನ್ನು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಇನ್ನಿತರೆ ದೇಶದಲ್ಲಿ ಹೆಚ್ಚಿನ ಮಂದಿ ಬಳಸುತ್ತಿದ್ದಾರೆ. ಇಂದಿನ ಮಕ್ಕಳು ಹಿಂದಿ ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ದೇಶ ಯಾವುದೇ ರಾಜ್ಯಕ್ಕೆ ತೆರಳಿದರೂ ಅಲ್ಲಿನ ಜನರೊಂದಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬಹುದಾಗಿದೆ’ ಎಂದರು.ಸಿಂಡಿಕೇಟ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಎಂ.ಪಿ. ಕಾಮತ್, ಶಿವಾಜಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜೇಮ್ಸ್ ಅಲ್ಮೇಡಾ, ನಜೀರ್ ಅಹಮ್ಮದ್ ಯುವ ಶೇಖ್ ಪಾಲ್ಗೊಂಡಿದ್ದರು. ಆಜಾದ್ ಯೂತ್ ಕ್ಲಬ್ ಅಧ್ಯಕ್ಷೆ ರಿಜ್ವಾನಾ ಶೇಖ್ ಸ್ವಾಗತಿಸಿದರು. ಮೀರಾ ನಾಯ್ಕ ವಂದಿಸಿದರು.ವಿವಿಧ ಸ್ಪರ್ಧೆ: ಶಿವಾಜಿ ಬಾಲಮಂದಿರ ಮತ್ತು ಶಿವಾಜಿ ಪ್ರೌಢಶಾಲೆಯ ಮಕ್ಕಳಿಗಾಗಿ ಹಿಂದಿಯಲ್ಲಿ ದೇಶಭಕ್ತಿಗೀತೆ ಹಾಗೂ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಲಕ್ಷ್ಮ ಪ್ರಥಮ, ಶ್ರುತಿ ದ್ವಿತೀಯ ಹಾಗೂ ರಾಕಾ ಗೋವೇಕರ್ ತೃತೀಯ ಸ್ಥಾನ ಪಡೆದುಕೊಂಡರು. ಭಾಷಣ ಸ್ಪರ್ಧೆಯಲ್ಲಿ ನೇತ್ರಾವತಿ ಲಮಾಣಿ ಪ್ರಥಮ, ಸಹನಾ ನಾಯ್ಕ ದ್ವಿತೀಯ ಹಾಗೂ ಸ್ವಾತಿ ಶಿರೋಡಕರ್ ತೃತೀಯ ಸ್ಥಾನ ಪಡೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry