ಮಂಗಳವಾರ, ಜೂನ್ 15, 2021
27 °C
‘ಪ್ರಜಾವಾಣಿ’ ಸಹಯೋಗ: ಉಚಿತ ಪ್ರವೇಶ

‘ಹೂಡಿಕೆದಾರರ ಸಮಾವೇಶ’ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಪ್ರಜಾವಾಣಿ’ ಹಾಗೂ ಸಿಡಿಎಸ್‌ಎಲ್‌, ಮುಂಬೈ ಷೇರು ವಿನಿಮಯ ಕೇಂದ್ರ, ಐಸಿಐಸಿಐ ಸೆಕ್ಯೂ­ರಿಟಿಸ್‌, ಬಿಒ ಪ್ರೊಟೆಕ್ಷನ್‌ ಫಂಡ್‌ ಸಂಸ್ಥೆಗಳ ಸಹಯೋಗದಲ್ಲಿ ಹೂಡಿಕೆ­ದಾರರ ಸಮಾವೇಶವು ಇದೇ 22­ರಂದು ಸಂಜೆ 4.30ಕ್ಕೆ ಕರ್ನಾಟಕ ವಾಣಿ­ಜ್ಯೋದ್ಯಮ ಸಂಸ್ಥೆ ಸಭಾಂಗಣ­ದಲ್ಲಿ ನಡೆಯಲಿದೆ.



ಷೇರು ಮಾರುಕಟ್ಟೆಯ ವಿವಿಧ ವಿಚಾರ­ಗಳ ಬಗ್ಗೆ ಹಾಗೂ ಹೂಡಿಕೆ­ಯ ಸಂದರ್ಭ ವಹಿಸ­ಬೇಕಾದ ಎಚ್ಚರಿಕೆ ಬಗ್ಗೆ ಆಯಾ ಕ್ಷೇತ್ರದ ತಜ್ಞರು ಕಾರ್ಯಕ್ರಮ­ದಲ್ಲಿ ಮಾಹಿತಿ ನೀಡಲಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಾದ ರಾಜೀವ್‌ ಗಾಂಧಿ ಈಕ್ವಿಟಿ ಉಳಿತಾಯ ಯೋಜನೆ (ಆರ್‌ಜಿಇಎಸ್‌ಎಸ್‌) ಹಾಗೂ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಕಾರ್ಯಕ್ರಮ­ದಲ್ಲಿ ಹೆಚ್ಚಿನ ಮಾಹಿತಿ ದೊರೆಯಲಿದೆ.



ಮುಂಬೈ ಷೇರು ವಿನಿಮಯ ಕೇಂದ್ರದ ವ್ಯವಸ್ಥಾಪಕ ಬದರಿ ನಾರಾ­ಯಣ್‌, ಐಸಿಐಸಿಐ ಸೆಕ್ಯೂರಿಟಿಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಅಭಿಷೇಕ್‌ ದೇಶಪಾಂಡೆ, ಕಂಪೆನಿಯ ತರಬೇತು­ದಾರ ಮಂಜುನಾಥ್‌ ಶಿಗ್ಗಾವ್‌ ಹಾಗೂ ಸಿಎಸ್‌ಡಿಎಸ್‌ನ ಬೆಂಗಳೂರು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಸಿ.ಎಸ್‌. ಹರೀಶ್‌ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳ­ಲಿದ್ದಾರೆ.



ಕಾರ್ಯಕ್ರಮಕ್ಕೆ ಉಚಿತ ಪ್ರವೇಶ­ವಿದೆ. ಷೇರು ಮಾರುಕಟ್ಟೆ ಬಗ್ಗೆ ಆಸಕ್ತಿ ಹೊಂದಿರುವ ಹಾಗೂ ಹೂಡಿಕೆ­ಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸು­ವವರು ಪಾಲ್ಗೊಳ್ಳಬಹುದು.



ಹೆಸರು ನೋಂದಾ­ಯಿಸಲು ಸಂಪರ್ಕಿ­­ಸಬೇಕಾದ ವಿಳಾಸ:  ‘ಪ್ರಜಾವಾಣಿ’, ಸಿಟಿಎಸ್‌ ನಂ 17/1ಬಿ, ಪಿ.ಬಿ. ರಸ್ತೆ, ಜೆ.ಜಿ. ಕಾಮರ್ಸ್‌ ಕಾಲೇಜು ಸಮೀಪ, ವಿದ್ಯಾನಗರ, ಹುಬ್ಬಳ್ಳಿ–580021.



ದೂರವಾಣಿ: 0836–2372081. ಮೊಬೈಲ್‌–94496­–­­73067.

ಇ–ಮೇಲ್‌: circ-–hubli@­deccanherald.­co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.