‘ಹೈ.ಕ–ಸ್ಪರ್ಧೆಗೆ ಸಜ್ಜಾಗಿ’

7

‘ಹೈ.ಕ–ಸ್ಪರ್ಧೆಗೆ ಸಜ್ಜಾಗಿ’

Published:
Updated:

ಗುಲ್ಬರ್ಗ: 371 (ಜೆ) ವಿಶೇಷ ಸ್ಥಾನಮಾನದ ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗಾವಕಾಶ ಹೆಚ್ಚಳ­ವಾಗ­ಲಿದ್ದು, ಇದರ ಸದುಪಯೋಗ ಪಡೆಯಲು

ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಸ್ಪರ್ಧೆ ಎದುರಿಸಲು ಸಜ್ಜಾಗಬೇಕು ಎಂದು ಜಿಲ್ಲಾ ಪಂಚಾ­ಯಿತಿ ಅಧ್ಯಕ್ಷ ರಮೇಶ್‌ ಎಸ್‌. ಮರ­ಗೋಳ ಹೇಳಿದರು.ನಗರದ ಸೇಂಟ್‌ ಮೇರಿಸ್‌ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರ ಕಚೇ­ರಿಯು  ಸರ್ಕಾರಿ ಶಾಲಾ ಮಕ್ಕಳಿಗಾಗಿ ಎರಡು ದಿನ ಏರ್ಪಡಿಸಿರುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.ಎಲ್ಲ ಮಕ್ಕಳು ಪ್ರತಿಭಾವಂತರೆ ಆಗಿದ್ದರೂ ಕೆಲವರಲ್ಲಿ ಏನೋ ವಿಶೇಷತೆ ಎದ್ದು ಕಾಣುತ್ತದೆ. ಅಂತಹ ಮಕ್ಕಳನ್ನು ಹಂತಹಂತವಾಗಿ ಮೇಲೆತ್ತುವುದಕ್ಕೆ ‘ಪ್ರತಿಭಾ ಕಾರಂಜಿ’ ವೇದಿಕೆ ಸೂಕ್ತವಾಗಿದೆ. ಈ ಭಾಗದ ಮಕ್ಕಳು ಕೀಳಿರಿಮೆ ಬೆಳೆಸಿಕೊಳ್ಳ­ಬಾ­ರದು. ಬಡ ಪ್ರತಿಭಾವಂತ ವಿದ್ಯಾರ್ಥಿ­ಗಳನ್ನು ಮೇಲೆತ್ತುವುದಕ್ಕೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊ­ಳಿಸಿದೆ. ಜಿಲ್ಲಾ ಪಂಚಾಯಿತಿ ಮೂಲಕ ಶಿಕ್ಷಣ ಇಲಾಖೆಗೆ ಅಗತ್ಯ ಅನುಕೂಲತೆಗಳನ್ನು ಒದಗಿಸಲಾಗು­ವುದು ಎಂದು ಹೇಳಿದರು.ಮಕ್ಕಳೆಲ್ಲ ಮಣ್ಣಿನ ಮುದ್ದೆಗಳಿದ್ದಂತೆ ಸಮಾಜ ಹಾಗೂ ಶಾಲೆಗಳು ಅವರಿಗೆ ಮೂರ್ತ ಸ್ವರೂಪ ನೀಡಬೇಕು. ಉತ್ತರ ರೀತಿಯಲ್ಲಿ ಬೆಳೆಸಬೇಕು. ಕಷ್ಟ–ಸುಖ–ಸಂಘರ್ಷ ಜೀವನದಲ್ಲಿ ಅವಿಭಾಜ್ಯ. ಮಕ್ಕಳು ಯಾವುದಕ್ಕೂ ಎದೆಗುಂದಬಾರದು. ಪ್ರಯತ್ನಪಟ್ಟರೆ ಯಶಸ್ಸು ಖಂಡಿತ ಸಿಗುತ್ತದೆ. ಮಕ್ಕಳು ಚೆನ್ನಾಗಿ ಓದಲಾರಂಭಿಸಿದರೆ, ಈ ಭಾಗದ ಹಿಂದುಳಿದಿದೆ ಎನ್ನುವ ಹಣೆಪಟ್ಟೆ ಕಿತ್ತೊಗೆಯಲು ಸಾಧ್ಯವಾಗು­ತ್ತದೆ ಎಂದು ಅಭಿಪ್ರಾಯಪಟ್ಟರು.ಪ್ರತಿಭಾ ಕಾರಂಜಿ ನೋಡಲ್‌ ಅಧಿಕಾರಿ ವಿಜಯಕುಮಾರ್‌ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಡಿಡಿಪಿಐ ಬಿ.ಆರ್‌. ಪರಮೇಶ ಸ್ವಾಗತಿಸಿದರು. ಜಿಲ್ಲಾ ಪಂಚಾಯತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಸಾವಳೇಶ್ವರ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ,  ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಡಾ. ರಾಧಾಕೃಷ್ಣರಾವ ಮದನಕರ, ಸೇಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ವಂ.ಫಾ. ಸುನಿಲ್ ಅಂದ್ರಾದೆ, ಜಿಲ್ಲಾ ಪಂಚಾಯಿತಿ ಸದಸ್ಯ ಗುರುಲಿಂಗಪ್ಪ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry