‘ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬನೆ’

7

‘ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬನೆ’

Published:
Updated:

ಹೊಳಲ್ಕೆರೆ: ಹೈನುಗಾರಿಕೆ ನಡೆಸುವುದರಿಂದ ಆರ್ಥಿಕವಾಗಿ ಸಬಲರಾಗಬಹುದು  ಎಂದು ಚಿತ್ರದುರ್ಗದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನಕುಮಾರ್‌ ಹೇಳಿದರು.ತಾಲ್ಲೂಕಿನ ಈಚಘಟ್ಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬುಧವಾರ ನಡೆದ ಹೈನುಗಾರಿಕೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಾವಯವ ಗೊಬ್ಬರ ಬಳಕೆ, ತಳಿಸಂವರ್ಧನೆ, ಉತ್ತಮ ಮೇವು, ಕಾಯಿಲೆಗಳು ಮತ್ತು ಪರಿಹಾರ, ಕರುಗಳ ಪಾಲನೆ, ಕೃತಕ ಗರ್ಭಧಾರಣೆ ಕುರಿತು ಮಾಹಿತಿ ನೀಡಿದರು.ತಾಲ್ಲೂಕು ಪಶು ಇಲಾಖೆ ಸಹಾಯಕ ನಿರ್ದೇಶಕ ರೆಹಮತ್ ಉಲ್ಲಾ ಮಾತನಾಡಿ, ಅಜೋಲ ಬೆಳೆಯುವುದು, ಮೇವು ಕಟಾವು, ಕೊಟ್ಟಿಗೆ ನಿರ್ಮಾಣ, ಸರ್ಕಾರದ ಸಹಾಯಧನಗಳ ಕುರಿತು ಮಾಹಿತಿ ನೀಡಿದರು. ಹೈನುಗಾರಿಕೆ ಮೇಲ್ವಿಚಾರಕ ಮಂಜುನಾಥ, ಉಮೇಶ್‌, ವರುಣ ಕುಮಾರ್‌, ಗ್ರಾ.ಪಂ. ಸದಸ್ಯೆ ರಂಗಮ್ಮ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry