ಬುಧವಾರ, ಫೆಬ್ರವರಿ 24, 2021
23 °C
33 ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಶಾಸಕರಿಂದ ಚಾಲನೆ

‘₹24ಕೋಟಿ ಅನುದಾನ ಬಿಡುಗಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘₹24ಕೋಟಿ ಅನುದಾನ ಬಿಡುಗಡೆ’

ದೇವನಹಳ್ಳಿ: ಕಳೆದ ಮೂರು ತಿಂಗಳಲ್ಲಿ ವಿವಿಧ ಇಲಾಖೆಗಳಿಂದ ಕಾಮಗಾರಿಗಾಗಿ ₹24 ಕೋಟಿ ಅನುಧಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.ತಾಲ್ಲೂಕಿನ ಆಲೂರು ಮತ್ತು ದುದ್ದನಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಗುದ್ದಲಿ ಪೂಜೆ ಮತ್ತು ಆಲೂರು ಗ್ರಾಮದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.ಕುಂದಾಣ ಗ್ರಾಮದ ಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೆ ₹ ಕೋಟಿ, ಸಮುದಾಯ ಭವನಕ್ಕೆ ₹50 ಲಕ್ಷ, ಬನ್ನಿಮಂಗಲದ ಕೆರೆ ಏರಿ ಅಗಲೀಕರಣ ಮತ್ತು ವಾಕಿಂಗ್ ಟ್ರ್ಯಾಕ್‌ಗೆ ಒಂದು ಕೋಟಿ ಮತ್ತು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಒಂದು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ₹ 7.5 ಲಕ್ಷ ವಿನಿಯೋಗಿಸಿತಿದ್ದು, ಒಟ್ಟು 33 ನೀರಿನ ಘಟಕಕ್ಕೆ ಏಕಕಾಲದಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದರು.ಆಲೂರು ದುದ್ದನಹಳ್ಳಿ ಪ್ರಸ್ತುತ ನೂತನ ಗ್ರಾಮ ಪಂಚಾಯಿತಿ ಕೇಂದ್ರವಾಗಿರುವುದರಿಂದ ಸಂಪನ್ಮೂಲ ಕೋಢೀಕರಣಕ್ಕೆ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೇ ಇತರ ಸಂದರ್ಭದಲ್ಲೂ  ಪಕ್ಷಾತೀತವಾಗಿ ಮುಖಂಡರು ಪರಸ್ಪರ ಸಹಕಾರ ನೀಡಬೇಕು.ಈಗಾಗಲೇ ಐದು ಗ್ರಾಮಗಳನ್ನು ಗ್ರಾಮ ವಿಕಾಸ ಯೋಜನೆಯಲ್ಲಿ ಸೇರ್ಪಡೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 207ರ ದುದ್ದನಹಳ್ಳಿ ಗೇಟ್ ನಿಂದ ಆಲೂರು ಗ್ರಾಮದವರೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.ತಾ.ಪಂ.ಸದಸ್ಯ ಪಿ.ಪಟಾಲಪ್ಪ, ಮಾಜಿ ಸದಸ್ಯ ಬಾಲಕೃಷ್ಣ, ವಿ.ಎಸ್.ಎಸ್.ಎನ್ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ರಂಗಸ್ವಾಮಿ, ಕಾಂಗ್ರೆಸ್ ಮುಖಂಡ ಬಿಸೇಗೌಡ, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ವೆಂಕಟೇಗೌಡ, ಮಾಜಿ ಅಧ್ಯಕ್ಷ ಮಂಜುನಾಥ್, ಟಿ.ಎ.ಪಿ.ಎಂ.ಸಿ.ಎಸ್ ಉಪಾಧ್ಯಕ್ಷ ನಾರಾಯಣಸ್ವಾಮಿ ಎಂ.ಪಿ.ಸಿ.ಎಸ್ ಅಧ್ಯಕ್ಷ ಮುನೇಗೌಡ, ಗ್ರಾ.ಪಂ.ಸದಸ್ಯ ಕುದುರಪ್ಪ, ನಾಗವೇಣಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.