‘15 ನೇಟಿಯೊ ಮಳಿಗೆ ರೂ. 4 ಕೋಟಿ ಹೂಡಿಕೆ’

7

‘15 ನೇಟಿಯೊ ಮಳಿಗೆ ರೂ. 4 ಕೋಟಿ ಹೂಡಿಕೆ’

Published:
Updated:

ಬೆಂಗಳೂರು: ಆಸ್ಟ್ರೇಲಿಯಾದ ನೇಟಿಯೊ ಕಂಪೆನಿ ನಿಸರ್ಗ ಮೂಲದ ವಸ್ತುಗಳಿಂದ ತಯಾರಿಸಿದ ಚರ್ಮರಕ್ಷಣೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳನ್ನು ಭಾರತದ ವಿವಿಧೆಡೆ ಮಾರಾಟ ಮಾಡ ಲೆಂದು ಪ್ರಸಕ್ತ ಹಣಕಾಸು ವರ್ಷ ರೂ. 4 ಕೋಟಿ ಬಂಡವಾಳ ಹೂಡಲಾಗುವುದು. ಆ ಮೂಲಕ ‘ನೇಟಿಯೊ’ದ ಒಟ್ಟು 20 ಮಾರಾಟ ಕೇಂದ್ರಗಳನ್ನು ಆರಂಭಿಸ ಲಾಗುವುದು ಎಂದು ‘ಬೆಲ್ಲೆ ವೋಸ್‌ ಪ್ರೈ.ಲಿ.’ನ ವ್ಯವಸ್ಥಾಪಕ ನಿರ್ದೇಶಕ ಗೌರವ್‌ ಗಾಬಾ ಹೇಳಿದರು.‘ನೇಟಿಯೊ’ ಬ್ರಾಂಡ್‌ನ ಮೊದಲ ಮಾರಾಟ ಕೇಂದ್ರವನ್ನು ನಗರದ ಫೀನಿಕ್ಸ್‌ ಸಿಟಿ ಮಾರ್ಕೆಟ್‌ನಲ್ಲಿ ಶುಕ್ರವಾರ ಉದ್ಘಾಟಿಸಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ 2 ತಿಂಗಳಲ್ಲಿ ದೆಹಲಿ, ಪುಣೆ, ಜೈಪುರ, ಹೈದರಾಬಾದ್‌ನಲ್ಲಿ ‘ನೇಟಿಯೊ’ ಮಳಿಗೆ ತೆರೆಯಲಾಗುವುದು. ನೇಟಿಯೊ ಬ್ರಾಂಡ್‌ನಲ್ಲಿ ಒಟ್ಟು 260 ಬಗೆಯ ಉತ್ಪನ್ನಗಳಿವೆ. ನೈಸರ್ಗಿಕ ಮೂಲದ ಷೇವಿಂಗ್‌ ಕ್ರೀಂ ಸೇರಿದಂತೆ ಪುರುಷರಿ ಗಾಗಿ ಪ್ರತ್ಯೇಕವಾದ ಸೌಂದರ್ಯವರ್ಧ ಕಗಳೇ ಇವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry