‘2020ರ ಒಲಿಂಪಿಕ್ಸ್‌ನಲ್ಲೂ ಕುಸ್ತಿ ಇರಲಿ’

7

‘2020ರ ಒಲಿಂಪಿಕ್ಸ್‌ನಲ್ಲೂ ಕುಸ್ತಿ ಇರಲಿ’

Published:
Updated:

ನವದೆಹಲಿ (ಪಿಟಿಐ):  2020ರ ಒಲಿಂಪಿಕ್ಸ್‌ನಲ್ಲೂ ಕುಸ್ತಿ ಸ್ಪರ್ಧೆ ಉಳಿಸಿಕೊಳ್ಳಲು ಅನುವು ಮಾಡಿ­ಕೊಡುವ ನಿಟ್ಟಿನಲ್ಲಿ ಅಂತರ­ರಾಷ್ಟ್ರೀಯ ಒಲಿಂಪಿಕ್‌ ಸಮಿತಿ­ಯು (ಐಒಸಿ) ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಕೇಂದ್ರ ಕ್ರೀಡಾ ಸಚಿವಾಲಯ ಆಗ್ರಹಿಸಿದೆ.ಈ ಸಂಬಂಧ ಕ್ರೀಡಾ ಕಾರ್ಯದರ್ಶಿ ಪಿ.ಕೆ.ದೇಬ್‌ ಐಒಸಿ ಸದಸ್ಯರಿಗೆ ಪತ್ರ ಬರೆದಿದ್ದಾರೆ. ಐಒಸಿಯ 125ನೇ ಅಧಿವೇಶನ ಸೆಪ್ಟೆಂಬರ್‌ 7ರಿಂದ 10ರವರೆಗೆ ಬ್ಯೂನಸ್‌ ಐರೀಸ್‌ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಮತದಾನ ನಡೆಯಲಿದೆ. ಬೇಸ್‌ಬಾಲ್‌/ಸಾಫ್ಟ್‌ಬಾಲ್‌, ಸ್ಕ್ವಾಷ್‌ ಹಾಗೂ ಕುಸ್ತಿ ಕ್ರೀಡೆಗಳು ಸ್ಪರ್ಧೆಯಲ್ಲಿದ್ದು ಒಂದು ಕ್ರೀಡೆಗೆ ಮಾತ್ರ ಸ್ಥಾನ ದೊರೆಯಲಿದೆ.‘1886ರ ಅಥ್ಲೆನ್ಸ್‌ ಒಲಿಂಪಿಕ್ಸ್‌ನಲ್ಲೂ ಕುಸ್ತಿ ಇತ್ತು. ಪ್ರಾಚೀನ ಒಲಿಂಪಿಕ್ಸ್‌ನ ಮುಖ್ಯ ಅಂಗವಾಗಿತ್ತು. ಹಾಗಾಗಿ ಈ ಕ್ರೀಡಾಮೇಳದಿಂದ ಯಾವುದೇ ಕಾರಣಕ್ಕೂ ಕುಸ್ತಿ ಕೈಬಿಡಬಾರದು’ ಎಂದು ದೇಬ್‌ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry