ಬುಧವಾರ, ಜೂನ್ 16, 2021
21 °C

‘371(ಜೆ):ಖರ್ಗೆ, ಧರಂ ಪ್ರಯತ್ನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಈ ಭಾಗದ ಜನರ ಬಹುಕಾಲದ ಹೋರಾಟ ಹಾಗೂ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಎನ್‌. ಧರ್ಮಸಿಂಗ್‌ ಅವರ ವಿಶೇಷ ಪ್ರಯತ್ನದಿಂದ 371(ಜೆ) ಅನುಷ್ಠಾನಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.ಹೈದರಾಬಾದ್‌ ಕರ್ನಾಟಕ ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ  ವತಿಯಿಂದ ನಗರದ ಅಪ್ಪ ಶತಮಾನೋತ್ಸವ ಭವನದಲ್ಲಿ 371(ಜೆ)ಕಲಂ ತಿದ್ದುಪಡಿಯ ವಿಶೇಷ ಸ್ಥಾನಮಾನ ಜಾರಿಯ ರೂವಾರಿಗಳಿಗೆ ಹಾಗೂ ಹೋರಾಟಗಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ  ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಖರ್ಗೆ ಹಾಗೂ ಧರ್ಮಸಿಂಗ್ ಅವರು ಸಂಸತ್ತು ಪ್ರವೇಶಿಸಿದ ನಂತರ ಸೋನಿಯಾ ಗಾಂಧಿ ಹಾಗೂ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್‌ ಅವರ ಮನವೊಲಿಸಿ 371(ಜೆ) ಕಲಂ ತಿದ್ದುಪಡಿ ತರಲು ಕಾರಣಕರ್ತರಾಗಿದ್ದಾರೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್‌ ಇಸ್ಲಾಂ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಎರಡು ವರ್ಷಗಳ ಬಳಿಕ ಈ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿತ್ತು. ಆದರೆ 371(ಜೆ) ಕಲಂ ತಿದ್ದುಪಡಿ ಅನುಷ್ಠಾನದಿಂದ ಈ ಭಾಗಕ್ಕೆ ನಿಜವಾದ ಸ್ಥಾನಮಾನ ಲಭಿಸಿದೆ. ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದ ಒಂದೇ ತಿಂಗಳಲ್ಲಿ ಇದರ ನಿಯಾಮಾವಳಿ ರೂಪಿಸಿದೆ ಎಂದರು.ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ, ಸುಲಫಲ ಮಠದ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.ಮಾರುತಿರಾವ ಡಿ. ಮಾಲೆ, ಅಶ್ಫಕ್‌ ಅಹ್ಮದ್‌ ಚುಲಬುಲ್‌, ಚನ್ನಾರಡ್ಡಿ ಪಾಟೀಲ, ಅರುಣಕುಮಾರ ಪಾಟೀಲ, ಶರಣು ಗದ್ದುಗೆ, ಲಕ್ಷ್ಮಣರಾವ ಗೋಗಿ, ಮಂಜುನಾಥ, ತಿಪ್ಪಣ್ಣ ಲಂಡನ್‌ಕರ, ನಾಗರಾಜ ಸವದಿ, ವೀರಣ್ಣ ಕೋರಳ್ಳಿ, ಗುರುರಾಜ ಶಕ್ತಿ, ಸಚಿನ್‌ ಫರತಾಬಾದ್‌, ಬಸವರಾಜ ಕುಮ್ನೂರ, ಭಾಗನಗೌಡ ಸಂಕನೂರ ಇತರರು ಇದ್ದರು.ಒಂದು ಚಿತ್ರ ಸಾಕು...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.