ಶುಕ್ರವಾರ, ಜೂನ್ 25, 2021
22 °C

₨ 12 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ತಾಲ್ಲೂಕಿನ ವಿವಿಧೆಡೆ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕಾಗಿ ಪ್ರಸ್ತುತ 2013–14ನೇ ಸಾಲಿನ ಆಯವ್ಯಯ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ₨ 12 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎಚ್‌.ಪಿ. ರಾಜೇಶ್‌ ಹೇಳಿದರು.ಪಟ್ಟಣದಲ್ಲಿ ಸೋಮವಾರ ₨ 10 ಲಕ್ಷ ವೆಚ್ಚದ ಜಮ್ಮಾಪುರ ಸಂಪರ್ಕ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.₨ 4.54 ಕೋಟಿ ವೆಚ್ಚದಲ್ಲಿ ಪಟ್ಟಣದಿಂದ ಬಿದರಕೆರೆವರೆಗೆ, ₨ 2.30 ಕೋಟಿ ವೆಚ್ಚದಲ್ಲಿ ಭರಮಸಾಗರ– ಬಿದರಕೆರೆ–ದೊಣೆಹಳ್ಳಿ ರಸ್ತೆ, ₨ 1 ಕೋಟಿ ವೆಚ್ಚದಲ್ಲಿ ಅಣಜಿ–ಸೊಕ್ಕೆ ರಸ್ತೆ ಸೇರಿದಂತೆ ಆಯವ್ಯಯ ಯೋಜನೆಯಡಿ ₨ 8 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ವಿಶೇಷ ಅಭಿವೃದ್ಧಿ ಯೋಜನೆಯಡಿ ₨ 1.38 ಕೋಟಿ ವೆಚ್ಚದಲ್ಲಿ ಬಿಳಿಚೋಡು–ಸೊಕ್ಕೆ ರಸ್ತೆ, ₨ 65.86 ಲಕ್ಷ ವೆಚ್ಚದಲ್ಲಿ ಜಗಳೂರು– ಬಿದರಕೆರೆ ರಸ್ತೆ, 13ನೇ ಹಣಕಾಸು ಯೋಜನೆಯಡಿ ₨ 37 ಲಕ್ಷ ವೆಚ್ಚದಲ್ಲಿ ಬಿಳಿಚೋಡು ಕೆರೆ ಹಿಂಭಾಗದ ರಸ್ತೆ, ₨ 31.25 ಲಕ್ಷ ವೆಚ್ಚದಲ್ಲಿ ಗೌಡಗೊಂಡನಹಳ್ಳಿ ಕ್ರಾಸ್‌ನಿಂದ –ಹೊಸಕೆರೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುವ ಕಾಲೊನಿಯಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ವಿಶೇಷ ಘಟಕ ಯೋಜನೆಯಡಿ  ಅಸಗೋಡು, ಕೊರಟಿಕೆರೆ, ಹಾಲೇಕಲ್ಲು ಸೇರಿದಂತೆ 8 ಹಳ್ಳಿಗಳಲ್ಲಿ ₨ 83.41 ಲಕ್ಷ, ಹಾಗೂ ಗಿರಿಜನ ಉಪ ಯೋಜನೆಯಡಿ ಗೋಪಗೊಂಡನಹಳ್ಳಿ, ಕಾಮಗೇತನ ಹಳ್ಳಿ ಸೇರಿದಂತೆ 8 ಹಳ್ಳಿಗಳಲ್ಲಿ ₨ 49 ಲಕ್ಷ ವೆಚ್ಚದ ಕಾಮಗಾರಿ ನಡೆಸಲಾಗುವುದು. ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಪಿ.ಪಾಲಯ್ಯ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆರ್‌.ಬಿ.ಬಣಕಾರ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.