₨3.17 ಲಕ್ಷಕ್ಕೆ ಹರಾಜಾದ ಲಾಡೆನ್ ಗೊಂಬೆ

ಲಾಸ್ ಏಂಜಲಿಸ್ (ಪಿಟಿಐ): ಕೇಂದ್ರೀಯ ಗುಪ್ತಚರ ಸಂಸ್ಥೆಯ (ಸಿಐಎ) ಕಾರ್ಯಚರಣೆ ಭಾಗವಾಗಿ ತಯಾರಾಗಿದ್ದ ಅಲ್ಖೈದಾ ಉಗ್ರ ಸಂಘಟನೆ ಒಸಾಮ ಬಿನ್ ಲಾಡೆನ್ನ ಗೊಂಬೆ ₨3.17 ಲಕ್ಷಕ್ಕೆ ಹರಾಜಾಗಿದೆ.
ಮಕ್ಕಳು ಉಗ್ರ ನಾಯಕರ ಆಕರ್ಷಣೆಗೆ ಒಳಗಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸಿಐಎ ‘ಡೆವಿಲ್ ಐಸ್’ ಎಂಬ ಹೆಸರಿನ ಗುಪ್ತಕಾರ್ಯಾಚರಣೆ ಕೈಗೊಂಡಿತ್ತು, ಆ ಕಾರ್ಯಾಚರಣೆ ಭಾಗವಾಗಿ ಲಾಡೆನ್ ಗೊಂಬೆಯನ್ನು ತಯಾರಿಸಲಾಗಿತ್ತು.
ಗೊಂಬೆಗಳನ್ನು ತಯಾರಿಸುವ ಪ್ರತಿಷ್ಠಿತ ಜಿ.ಐ.ಜೊ ಕಂಪೆನಿಯಾ ಸ್ಥಾಪಕ ಡೊನಾಲ್ಡ್ ಲೆವಿಸ್ ಅವರು 2005ರಲ್ಲಿ ಈ ಗೊಂಬೆಯನ್ನು ವಿನ್ಯಾಸಗೊಳಿಸಿದ್ದರು. 12 ಇಂಚಿನ ಒಟ್ಟು ಮೂರು ಗೊಂಬೆಗಳನ್ನು ತಯಾರಿಸಲಾಗಿತ್ತು.
ಒಂದು ಗೊಂಬೆ ಸಿಐಎ ವಶದಲ್ಲಿದ್ದು, ಇನ್ನು ಎರಡು ಗೊಂಬೆಗಳನ್ನು ಲೆವಿಸ್ ಕುಟುಂಬ ತನ್ನ ಬಳಿ ಇಟ್ಟುಕೊಂಡಿತ್ತು. ಕಳೆದ ನವೆಂಬರ್ನಲ್ಲಿ ಲೆವಿಸ್ ಕುಟುಂಬ ಒಂದು ಗೊಂಬೆಯ ಹಾರಾಜು ನಡೆಸಿದ್ದು, ಬರೋಬ್ಬರಿ ₨7.54 ಲಕ್ಷಕ್ಕೆ ಹಾರಾಜಾಗಿತ್ತು. ಲೆವಿಸ್ ಅವರ ಮಗ ಈಗ ಮತ್ತೊಂದು ಗೊಂಬೆ ಹರಾಜು ನಡೆಸಿದ್ದು, ಅದನ್ನು ಇಲ್ಲಿನ ನೇಟ್ ಡಿ ಸ್ಯಾಂಡರ್ಸ್ ಹರಾಜು ಕಂಪೆನಿ ₨ 3.17 ಲಕ್ಷಕ್ಕೆ ಖರೀದಿಸಿದೆ.
‘ಈ ಗೊಂಬೆ ಒಂದು ಸ್ಥಿರ ತಲೆಯನ್ನು ಹೊಂದಿದ್ದು ಅದು ಲಾಡೆನ್ ರೀತಿ ಇದೆ. ಇನ್ನೂ ಮೂರು ಬದಲಾಯಿಸಬಹುದಾದ ತಲೆಗಳನ್ನು ತಯಾರಿಸಿದ್ದು, ಅದು ಲಾಡೆನ್ನನ್ನು ‘ರಾಕ್ಷಸ’ ಸ್ವರೂಪದಲ್ಲಿ ಚಿತ್ರಿಸಲಾಗಿದ್ದು, ಅದಕ್ಕೆ ಲೋಹದ ನಿಲುವುಗಳನ್ನು ಜೋಡಿಸಲಾಗಿದೆ. ಈ ಗೊಂಬೆಗೆ ಸಾಂಪ್ರದಾಯಿಕ ಇಸ್ಲಾಮಿಕ್ ಬಿಳಿ ಉಡುಪನ್ನು ತೊಡಿಸಲಾಗಿದೆ,’ ಎಂದು ಹರಾಜು ಸಂಸ್ಥೆ ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.