₹65 ಸಾವಿರ ಕೋಟಿ ತೆರಿಗೆ ಮರುಪಾವತಿ

ನವದೆಹಲಿ (ಪಿಟಿಐ): ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆದಾರರಿಗೆ ಒಟ್ಟು 65 ಸಾವಿರ ಕೋಟಿ ರೂಪಾಯಿ ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ತಿಳಿಸಿದೆ.
‘ಏಪ್ರಿಲ್ನಿಂದ ಈತನಕ ಕೇಂದ್ರೀಯ ನೇರ ತೆರಿಗೆ ಮಂಡಳಿಯು(ಸಿಬಿಡಿಟಿ) 1.98 ಕೋಟಿ ತೆರಿಗೆದಾರರಿಗೆ ಒಟ್ಟು ₹ 65 ಸಾವಿರ ಕೋಟಿ ಮರುಪಾವತಿ ಮಾಡಿದೆ. ಇದೊಂದು ದಾಖಲೆ’ ಕಂದಾಯ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಅವರು ಟ್ವೀಟ್ ಮಾಡಿದ್ದಾರೆ.
ತೆರಿಗೆದಾರರ ಕುಂದುಕೊರತೆಗಳಿಗೆ ಸೂಕ್ತರೀತಿಯಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ₹ 50 ಸಾವಿರಕ್ಕೂ ಕಡಿಮೆ ಮೊತ್ತದ ಮರುಪಾವತಿ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಬೆಂಗಳೂರಿನಲ್ಲಿರುವ ಕೇಂದ್ರೀಯ ಸಂಸ್ಕರಣಾ ಕೇಂದ್ರಕ್ಕೆ ಸಿಬಿಡಿಟಿ ಕಳೆದ ಡಿಸೆಂಬರ್ನಲ್ಲಿ ಸೂಚಿಸಿತ್ತು.
‘ಕಳೆದ ತಿಂಗಳ ವಿಶೇಷ ಅಭಿಯಾನದಲ್ಲಿ ₹ 50 ಸಾವಿರಕ್ಕೂ ಕಡಿಮೆ ಮೊತ್ತದ 18.28 ಲಕ್ಷ ತೆರಿಗೆದಾರರಿಗೆ ₹1,793 ಕೋಟಿ ಮರುಪಾವತಿ ಮಾಡಲಾಗಿದೆ’ ಎಂದು ಆಧಿಯಾ ಅವರು ತಿಳಿಸಿದ್ದಾರೆ.
ಅಲ್ಪ ಮೊತ್ತದ ಮರುಪಾವತಿಗಳನ್ನು ತ್ವರಿತವಾಗಿ ಮಾಡುವಂತೆ ಹಣಕಾಸು ಸಚಿವಾಲಯವು ಶುಕ್ರವಾರವಷ್ಟೇ ಸೂಚಿಸಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.