ಸೋಮವಾರ, ಮಾರ್ಚ್ 8, 2021
30 °C

₹70 ಸಾವಿರಕ್ಕೆ ಕೋಟ್ಯಂತರ ಬೆಲೆಯ ಭೂಮಿ ಪಡೆದ ಹೇಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹70 ಸಾವಿರಕ್ಕೆ ಕೋಟ್ಯಂತರ ಬೆಲೆಯ ಭೂಮಿ ಪಡೆದ ಹೇಮಾ

ಮುಂಬೈ: ನೃತ್ಯ ಶಾಲೆ ಆರಂಭಿಸುವುದಕ್ಕಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಕೇವಲ 70 ಸಾವಿರ ರೂಪಾಯಿಗೆ ನಟಿ ಹೇಮಾ ಮಾಲಿನಿ ಅವರಿಗೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪಡೆದ ಮಾಹಿತಿಯಿಂದ ಈ ವಿಷಯ ಬಯಲಾಗಿದೆ.ಅಂಧೇರಿ ಪಶ್ಚಿಮ ಹೊರವಲಯದ ಆಯಕಟ್ಟಿನ ಪ್ರದೇಶದಲ್ಲಿ ನೃತ್ಯ ಅಕಾಡೆಮಿ  ಮತ್ತು ಸಾಂಸ್ಕೃತಿಕ ಸಂಕೀರ್ಣ ಆರಂಭಿಸಲು ಕಳೆದ ತಿಂಗಳ 29ರಂದು  ಜಮೀನು ಮಂಜೂರು ಮಾಡಲಾಗಿದೆ.ಚದರ ಮೀಟರ್‌ಗೆ 35 ರೂಪಾಯಿ ಪ್ರಕಾರ ಕೇವಲ 70 ಸಾವಿರ ರೂಪಾಯಿಗೆ ಎರಡು ಸಾವಿರ ಚದರ ಮೀಟರ್‌ ಭೂಮಿ ನೀಡಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಅನಿಲ್‌ ಗಲಗಲಿ ತಿಳಿಸಿದ್ದಾರೆ.ಬಿಜೆಪಿ – ಶಿವಸೇನಾ ನೇತೃತ್ವದ ಸರ್ಕಾರ ತಿಂಗಳ ಹಿಂದೆಯಷ್ಟೆ ಎರಡು ಸಾವಿರ ಚದರ ಮೀಟರ್‌ ಭೂಮಿ ನೀಡುವ ತೀರ್ಮಾನ ತೆಗೆದುಕೊಂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.