ಈಜುಡುಗೆಯಲ್ಲಿ ದೇಗುಲಕ್ಕೆ ಪ್ರವೇಶವಿಲ್ಲ

ಸೋಮವಾರ, ಜೂಲೈ 22, 2019
27 °C

ಈಜುಡುಗೆಯಲ್ಲಿ ದೇಗುಲಕ್ಕೆ ಪ್ರವೇಶವಿಲ್ಲ

Published:
Updated:

ಪಣಜಿ (ಐಎಎನ್‌ಎಸ್): `ಈಜುಡುಗೆಯಲ್ಲಿ ಅಥವಾ ಸಮುದ್ರ ತಡಿಯಲ್ಲಿ ಧರಿಸುವ ದಿರಿಸುಗಳಲ್ಲಿ ಇನ್ನು ಮುಂದೆ ದೇವಸ್ಥಾನ ಪ್ರವೇಶಿಸುವಂತಿಲ್ಲ~ ಎಂದು ಗೋವಾದ ಮಹಾಲ್ಸಾ ನಾರಾಯಣಿ ದೇವಾಲಯ ಸಮಿತಿ ಸೂಚಿಸಿದೆ.`ವಿದೇಶಿ ಪ್ರವಾಸಿಗರು ಸಭ್ಯತೆಯ ಎಲ್ಲೆ ಮೀರಿದ ಉಡುಪುಗಳನ್ನು ಧರಿಸಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದು ದೇವಸ್ಥಾನ ಪರಿಸರದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಿದೆ. ಇದನ್ನು ಗಮನದಲ್ಲಿರಿಸಿಕೊಂಡು, ಇನ್ನು ಮುಂದೆ ದೇವಸ್ಥಾನಕ್ಕೆ ಭೇಟಿ ನೀಡುವವರು `ಸಭ್ಯ~ ಉಡುಗೆಗಳಲ್ಲಿ ಬರಬೇಕು ಎಂದು ಸೂಚಿಸಲಾಗಿದೆ~ ಎಂದು ಸಮಿತಿ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry