ಮಂಗಳವಾರ, ಮಾರ್ಚ್ 2, 2021
31 °C

1 ಕ್ಲಿಕ್‌ ಎಂಬ ಅಂತರ್ಜಾಲ

ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

1 ಕ್ಲಿಕ್‌ ಎಂಬ ಅಂತರ್ಜಾಲ

ದೂರದೂರಿನಲ್ಲಿರುವ ಉದ್ಯೋಗಾಕಾಂಕ್ಷಿ ಐಟಿ ಕಂಪೆನಿಯ ಸಂದರ್ಶನಕ್ಕೆಂದು ಬೆಂಗಳೂರಿಗೆ ಬರಬೇಕೆಂದರೆ ಅದಕ್ಕಾಗುವ ವೆಚ್ಚ, ಸಮಯ ಮುಂತಾದ ತೊಂದರೆಗಳು ಸಾಮಾನ್ಯ. ಆದರೆ ಇದನ್ನು ತಗ್ಗಿಸುವ ದಿಸೆಯಲ್ಲಿ ಐಟಿ ಕಂಪೆನಿಗಳು ವಿಡಿಯೋ ಕಾಲ್‌ ಮೂಲಕ ಅಭ್ಯರ್ಥಿಯ ಸಂದರ್ಶನ ಪಡೆಯುವ ಹೊಸ ಪರಿಪಾಠ ಆರಂಭವಾಗಿದೆ. ಇಂಥ ಅವಕಾಶವನ್ನು ಟರ್ಟಲ್‌ಯೋಗಿ ಕಂಪೆನಿ ಸಮರ್ಥವಾಗಿ ಬಳಸಿಕೊಂಡಿದೆ.‘1ಕ್ಲಿಕ್‌’ ಎಂಬ ಹೊಸಬಗೆಯ ಅಂತರ್ಜಾಲ ತಂತ್ರಾಂಶದಿಂದಾಗಿ ಕಂಪೆನಿಗಳ ಹಾಗೂ ವೈಯಕ್ತಿಕ ವ್ಯವಹಾರಗಳಿಗೆ ದೂರದೂರುಗಳಿಗೆ ಭೇಟಿ ನೀಡುವ ರಗಳೆಯನ್ನ ತಪ್ಪಿಸಬಹುದು. ಎಲ್ಲವೂ ಒಂದು ಕ್ಲಿಕ್‌ನಲ್ಲಿಯೇ ಮುಗಿಯುವ ಸರಳ ಸಂವಹನ ಅಂತರ್ಜಾಲ ಸೌಲಭ್ಯವಿದು. ಕಡಿಮೆ  ಬ್ಯಾಂಡ್‌ವಿಡ್ತ್‌ನಲ್ಲೂ ನಿರಂತರ ಸಂವಹನ ನಡೆಸುವ ಸಾಮರ್ಥ್ಯ ಇದ್ದರದ್ದು. ಇದಕ್ಕೆ ಕಂಪೆನಿಯದ್ದೇ ಪ್ರತ್ಯೇಕ ತಂತ್ರಾಶವಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹೃಷಿಕೇಶ್‌ ಕುಲಕರ್ಣಿ ಹೇಳುತ್ತಾರೆ.1ಕ್ಲಿಕ್‌ ಸಂವಹನ ಎಂದ ಮಾತ್ರಕ್ಕೆ ಅದು ಕೇವಲ ವ್ಯಕ್ತಿಗಳ ನಡುವೆ ಮಾತು ಅಲ್ಲ. ಮಾತು ಮುಗಿದ ನಂತರ ಆ ಮಾತಿನ ತಿರುಳು, ಸಾರಾಂಶ, ಸಂದರ್ಶನಕ್ಕೆ ಹಾಜರಾದ ವ್ಯಕ್ತಿಯ ಮಾತಿನಲ್ಲಿನ ದೃಢತೆ ಅಳೆಯುವ ಮಾಪನ, ಸಂವಹನವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳುವ ಸೌಲಭ್ಯ ಹೀಗೆ ಸಾಕಷ್ಟು ಸವಲತ್ತುಗಳು ಇದರಲ್ಲಿದೆ.ಎಂಟು ಮಂದಿ ಡೆವಲಪರ್‌ಗಳು ಸುಮಾರು 15 ತಿಂಗಳ ಅವಿರತ ಪರಿಶ್ರಮದಿಂದಾಗಿ 1 ಕ್ಲಿಕ್‌ ಸಿದ್ಧವಾಗಿದೆ. ಸಿಂಗಪುರ, ಮುಂಬೈ, ಬೆಂಗಳೂರು ಹೀಗೆ ಮಹಾನಗರಗಳ ಹಲವಾರು  ಕಂಪೆನಿಗಳು ಈಗ ಒನ್‌ಕ್ಲಿಕ್‌ ಅನ್ನು ನೆಚ್ಚಿಕೊಂಡಿವೆ ಎನ್ನುತ್ತಾರೆ ಹೃಷಿಕೇಶ್‌.

ಬ್ರೌಸರ್‌ ಆಧಾರವಾಗಿಟ್ಟುಕೊಂಡು ಅಭಿವೃದ್ಧಿಪಡಿ­ಸಲಾದ 1ಕ್ಲಿಕ್‌ನಲ್ಲಿ ಎಲ್ಲವೂ ಮೌಸ್‌ನ ಒಂದೇ ಕ್ಲಿಕ್‌ನಲ್ಲಿ ನಡೆಯುವಷ್ಟು ಸರಳವಾಗಿದೆ. ಇಬ್ಬರ ನಡುವೆ ಅಥವಾ ಹಲವು ವ್ಯಕ್ತಿಗಳ ಜತೆ ಏಕಕಾಲದಲ್ಲಿ ಸಂವಹನ ನಡೆಸಬಹುದು. ಹೀಗಾಗಿ ಇದು ಕೇವಲ ಕಂಪೆನಿಗಳಿಗೆ ಮಾತ್ರವಲ್ಲ, ಗೆಳೆಯ, ಗೆಳತಿಯರಿಗೂ ಅನುಕೂಲವಾಗಲಿದೆ. ಯಾವುದೇ ರೀತಿಯ ಪ್ಲಗ್‌ಇನ್‌ಗಳು ಇದಕ್ಕಿಲ್ಲ. ಮೊಬೈಲ್‌ ಆ್ಯಪ್‌ ಸ್ನೇಹಿ ಕೂಡಾ.ಕ್ರೋಮ್‌, ಫೈರ್‌ಫಾಕ್ಸ್‌, ಒಪಸ್‌, ವಿಪಿ8, ಎಸ್‌ಆರ್‌ಟಿಪಿ ಮುಂತಾದ ಬ್ರೌಸರ್‌ಗಳಲ್ಲಿ ಯಾವುದೇ ರೀತಿಯ ತಡೆ ಇಲ್ಲದೆ ಇದು ಕಾರ್ಯನಿರ್ವಹಿಸಬಲ್ಲದು.ಈಗಾಗಲೇ ಬಳಕೆಯಲ್ಲಿರುವ ವಿಡಿಯೊ ಸಂವಹನ ತಂತ್ರಾಂಶಗಳು 3 ಮಂದಿ ಮಾತನಾಡಲು 1 ಎಂಬಿಪಿಎಸ್‌ ಡಾಟಾ ಬೇಡುತ್ತವೆ. ಆದರೆ 1ಕ್ಲಿಕ್‌ಗೆ ಅದೇ ಮಾಹಿತಿಯನ್ನು ಕೇವಲ 300ಕೆಬಿಪಿಎಸ್‌ನಲ್ಲಿ ನೀಡುವ ಸಾಮರ್ಥ್ಯ ಹೊಂದಿದೆ. ಗರಿಷ್ಠ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ನಡುವೆ ತಡೆರಹಿತ ನೇರ ಸಂವಹನ ನಡೆಸುವ ಸಾಮರ್ಥ್ಯ ಇದಕ್ಕಿದೆ.ಒನ್‌ ಕ್ಲಿಕ್‌ ಬಳಸುವುದಿದ್ದರೆ 1click.ioio ಅಂತರ್ಜಾಲ ವಿಳಾಸಕ್ಕೆ ಭೇಟಿ ನೀಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.