ಗುರುವಾರ , ನವೆಂಬರ್ 21, 2019
20 °C

1 ನಾಮಪತ್ರ ಹಿಂದಕ್ಕೆ

Published:
Updated:

ಮಡಿಕೇರಿ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಗಿರಿ ಉತ್ತಪ್ಪ ಅವರು ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ.ನಾಮಪತ್ರ ವಾಪಸ್ ಪಡೆಯಲು ಕಡೆ ದಿನವಾಗಿದ್ದ ಶನಿವಾರ ಇವರೊಬ್ಬರೇ ನಾಮಪತ್ರವನ್ನು ವಾಪಸ್ ಪಡೆದರು. ಜಿಲ್ಲೆಯ ಮಡಿಕೇರಿ (208) ಮತ್ತು ವಿರಾಜಪೇಟೆ (209) ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 23 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.ಸ್ಪರ್ಧೆಯಲ್ಲಿರುವವರು: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಕೆ.ಎಂ. ಲೋಕೇಶ್, ಭಾರತೀಯ ಜನತಾ ಪಕ್ಷದಿಂದ ಎಂ.ಪಿ. ಅಪ್ಪಚ್ಚು ರಂಜನ್, ಜಾತ್ಯತೀತ ಜನತಾದಳ ಪಕ್ಷದಿಂದ ಬಿ.ಎ. ಜೀವಿಜಯ, ಬಹುಜನ ಸಮಾಜ ಪಕ್ಷದಿಂದ ಎಸ್.ಪಿ. ಮಹಾದೇವಪ್ಪ, ಕರ್ನಾಟಕ ಜನತಾ ಪಕ್ಷದಿಂದ ಶಂಭುಲಿಂಗಪ್ಪ, ಸಿಪಿಐಎಂಎಲ್ ಪಕ್ಷದಿಂದ ವನಜಾಕ್ಷಿ, ಜನತಾದಳ (ಸಂಯುಕ್ತ) ಪಕ್ಷದಿಂದ ಕೆ.ಎಂ. ಬಷೀರ್, ಸ್ವತಂತ್ರ ಅಭ್ಯರ್ಥಿಗಳಾಗಿ ಎಂ.ವಿ. ಸಂತೋಷ್‌ಕುಮಾರ್,ರಫೀಕ್,ನಿಜಾಮುದ್ದೀನ್, ಎಂ.ಪಿ. ಹರೀಶ್ ಪೂವಯ್ಯ, ಸಿ.ವಿ. ನಾಗೇಶ್ (ಜೆಡಿಎಸ್ ಬಂಡಾಯ), ಡಾ. ಬಿ.ಸಿ. ನಂಜಪ್ಪ, ಡಿ.ಎಸ್. ಗುರುಪ್ರಸಾದ್ ಕಣದಲ್ಲಿದಾರೆ.ವಿರಾಜಪೇಟೆ ವಿದಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ.ಜಿ. ಬೋಪಯ್ಯ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಬಿ.ಟಿ. ಪ್ರದೀಪ್, ಜನತಾದಳ (ಜಾತ್ಯತೀತ) ಪಕ್ಷದಿಂದ ಡಿ.ಎಸ್. ಮಾದಪ್ಪ, ಸಿಪಿಐಎಂಎಲ್ ಪಕ್ಷದಿಂದ ಚಂಗಪ್ಪ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಜನಿತ್ ಅಯ್ಯಪ್ಪ, ಎಸ್‌ಡಿಪಿಐ ಪಕ್ಷದಿಂದ ಉಸ್ಮಾನ್, ಸ್ವತಂತ್ರ ಅಭ್ಯರ್ಥಿಗಳಾಗಿ ವಿಜಯಸಿಂಗ್ ಆರ್.ಡೇವಿಡ್, ಮಾರಣ್ಣ ದಿಲೀಪ್ ಕುಮಾರ್, ಸೋಮೆಯಂಡ ಡಿ. ಉದಯ ಅವರು ಕಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)