ಸೋಮವಾರ, ನವೆಂಬರ್ 18, 2019
28 °C

`1 ಸಾವಿರ ನೌಕರರು ಚುನಾವಣೆ ಕಾರ್ಯಕ್ಕೆ ನಿಯೋಜನೆ'

Published:
Updated:

ಹುಣಸೂರು: ತಾಲ್ಲೂಕಿನಲ್ಲಿ ಶಾಂತಿಯುತ ಚುನಾವಣೆ ನಡೆಸಲು ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 1 ಸಾವಿರ ನೌಕರರನ್ನು ಮೇ 5ರಂದು ನಡೆಯಲಿರುವ ಚುನಾವಣಾ ಕಾರ್ಯಕ್ಕೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗು ಚುನಾವಣಾಧಿಕಾರಿ ವಿನುತಾ ಪ್ರಿಯ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಿಸಲು ಎರಡು ಪಾಳೆಯಲ್ಲಿ ಸಂಚಾರ ಮ್ಯಾಜಿಸ್ಟೇಟರ್ ಘಟಕವನ್ನು ನಿಯೋಜಿಸ ಲಾಗಿದೆ. ಈ ಘಟಕದಲ್ಲಿ ತಲಾ 4 ಅಧಿಕಾರಿಗಳು ಸೇರಿದಂತೆ 4 ಪೊಲೀಸ್ ಕರ್ತವ್ಯ ನಿರ್ವಹಿಸಲಿದ್ದಾರೆ. ಇದಲ್ಲದೆ 16 ಸೆಕ್ಟೋರಿಯಲ್ ಮ್ಯಾಜಿಸ್ಟೇಟರ್ ರೂಪಿಸಿದ್ದು, ಈ ಘಟಕಕ್ಕೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಸಂಪೂರ್ಣ ಅಧಿಕಾರ ನೀಡಲಾಗಿದ್ದು, ಸ್ಥಳದಲ್ಲೇ ದಂಡ ಹಾಗೂ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ ಎಂದರು.ತನಿಖಾ ಕೇಂದ್ರ: ತಾಲ್ಲೂಕಿನ ಗಡಿ ಭಾಗದಲ್ಲಿ ತನಿಖಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದರಿಂದ ಹೊರಭಾಗದಿಂದ ಮದ್ಯ ಮತ್ತು ಹಣ ತಾಲ್ಲೂಕಿಗೆ ಬರುವುದನ್ನು ನಿಯಂತ್ರಿಸಲಾಗುವುದು. ಕಲ್ಲಬೆಟ್ಟ, ವೀರನಹೊಸಹಳ್ಳಿ ಮತ್ತು ಮನುಗನಹಳ್ಳಿಗಳಲ್ಲಿ ತನಿಖಾ ಕೇಂದ್ರ ಸ್ಥಾಪಿಸಲಾಗಿದೆ ಎಂದರು.ನಾಮಪತ್ರ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಈ ಹಿಂದೆ 2 ಅಫಿಡವಿಟ್‌ಗಳ ಮೂಲಕ ನಾಮಪತ್ರ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಒಂದು ಅಫಿ–ಡವಿಟ್‌ನೊಂದಿಗೆ ಫಾರಂ ನಂ 26ರ ಸಮೇತ ನಾಮಪತ್ರ ಸಲ್ಲಿಸಬೇಕು. ಒಂದು ವೇಳೆ ಅಭ್ಯರ್ಥಿಗಳು ತಪ್ಪು ಮಾಡಿದಲ್ಲಿ ಅರಿವು ಮೂಡಿಸಲಾಗುವುದು ಎಂದರು. ತಹಶೀಲ್ದಾರ್ ಶಿವಾನಂದಮೂರ್ತಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)