ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 .20 ಕೋಟಿ ಮೌಲ್ಯದ 483 ಕಡಲಾಮೆ ವಶ:ವಿದೇಶಕ್ಕೆ ಸಾಗಾಣಿಕೆ ಯತ್ನ; ಆರೋಪಿ ಸೆರೆ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಅಪರೂಪದ ಕಡಲಾಮೆಗಳನ್ನು ಅಕ್ರಮವಾಗಿ ಬ್ಯಾಂಕಾಕ್‌ಗೆ ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ.
ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಅಪರೂಪದ 483 ನಕ್ಷತ್ರ ಆಮೆಗಳನ್ನು ತೆರಿಗೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ತೆರಿಗೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದು ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಆರೋಪಿಯು ತಮಿಳುನಾಡಿನ ತ್ರಿಶು ಜಿಲ್ಲೆಯ ಪೋಡಿಯಾಲಂ ಗ್ರಾಮದ ಮುದುರ್ ಮೊಯಿದ್ದೀನ್ (47) ಎಂದು ತಿಳಿದು ಬಂದಿದೆ.
`ಈ ಅಪರೂಪದ ಆಮೆಗಳನ್ನು ಚೆನ್ನೈನ ಸಮುದ್ರ ತೀರದಲ್ಲಿ ಸೆರೆ ಹಿಡಿಯಲಾಗಿದೆ.

ಆರೋಪಿಯು ಈ ಆಮೆಗಳನ್ನು ಬಸ್ ಮೂಲಕ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ದೊಡ್ಡಗಾತ್ರದ ಕೆಂಪು ಸೂಟ್‌ಕೇಸ್‌ನಲ್ಲಿ ತಂದ್ದ್ದಿದ. ಇವುಗಳನ್ನು ವಿದೇಶಕ್ಕೆ ಸಾಗಿಸುವುದು ಈತನ ಉದ್ದೇಶವಾಗಿತ್ತು. ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
 
ಈತನನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪಟ್ಟಣದ ತ್ವರಿತ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ~ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದೇಶಿ ಮಾರುಕಟ್ಟೆಯಲ್ಲಿ ಈ ಕಡಲಾಮೆಗಳಿಗೆ ಒಂದಕ್ಕೆ ಕನಿಷ್ಠ 25 ಸಾವಿರ ರೂಪಾಯಿಗಳಷ್ಟು ಮೌಲ್ಯವಿದೆ. ವಶಪಡಿಸಿಕೊಳ್ಳಲಾಗಿರುವ ಒಟ್ಟು ಆಮೆಗಳ ಮೌಲ್ಯ ರೂ 1.20 ಕೋಟಿ ಎನ್ನಲಾಗಿದೆ.`ಹಾಂಕಾಂಗ್, ಮಲೇಷ್ಯಾ, ಬ್ಯಾಂಕಾಕ್ ಇತರೆ ರಾಷ್ಟ್ರಗಳಲ್ಲಿ ಮನೆಯ ವಾಸ್ತುವಿಗಾಗಿ ಈ ನಕ್ಷತ್ರ ಆಮೆಗಳಿಗೆ ಭಾರಿ ಬೇಡಿಕೆ ಇದೆ~ ಎಂದು ಸಂಚಾರಿ ಉಪವಲಯ ಅರಣ್ಯಾಧಿಕಾರಿ ಎಂ.ಮೂರ್ತಿ, ವಲಯಾಧಿಕಾರಿ ಸಿ.ಆರ್.ಅರುಣ್, ಕೆ.ಎಂನಾರಾಯಣ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT