ಸೋಮವಾರ, ಜೂನ್ 1, 2020
27 °C

10ಕ್ಕಿಂತ ಹೆಚ್ಚು ಸಂಗಾತಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಐಎಎನ್‌ಎಸ್‌):  ಹಾರ್ವರ್ಡ್‌ ವಿಶ್ವವಿದ್ಯಾಲಯದ ಶೇ 26 ರಷ್ಟು ವಿದ್ಯಾರ್ಥಿಗಳು 10 ಅಥವಾ  ಅದಕ್ಕಿಂತಲೂ ಹೆಚ್ಚು ಜನ ಲೈಂಗಿಕ ಸಂಗಾತಿಗಳನ್ನು ಹೊಂದಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ.ಶೇ 21ರಷ್ಟು ಹಿರಿಯ ವಿದ್ಯಾರ್ಥಿಗಳು ತಾವು ಇನ್ನೂ ಕನ್ಯೆಯರು ಎಂದು ತಿಳಿಸಿದ್ದಾರೆ.  ಸಮೀಕ್ಷೆಗೆ ಒಳಪಟ್ಟ ಪ್ರತಿ ನಾಲ್ಕು  ಜನರ ಪೈಕಿ ಒಬ್ಬರು ಕಾಲೇಜಿಗೆ ಹೋಗುವ ಸಮಯದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ತಿಳಿಸಿದ್ದಾರೆ.ಹಾರ್ವರ್ಡ್‌ ವಿ.ವಿಯ  ಪತ್ರಿಕೆಯೊಂದು ಈ  ಸಮೀಕ್ಷೆ  ನಡೆಸಿದ್ದು, ಇದಕ್ಕೆ ‘ಹಾರ್ವರ್ಡ್‌ ಕ್ರಿಮ್ಸನ್‌’ ಎಂದು ತಲೆಬರಹ ಕೊಟ್ಟಿದೆ. ಶೇ 60ರಷ್ಟು ವಿದ್ಯಾರ್ಥಿಗಳು ವಾರದಲ್ಲಿ ಒಂದು ದಿನ ಮದ್ಯಪಾನ ಮಾಡುವುದಾಗಿ ಹೇಳಿದರೆ, ಶೇ 40ರಷ್ಟು ವಿದ್ಯಾರ್ಥಿಗಳು ವಾರದಲ್ಲಿ ಒಂದು ಬಾರಿ ಧೂಮಪಾನ ಮಾಡುವುದಾಗಿ ತಿಳಿಸಿದ್ದಾರೆ. ಹಾರ್ವರ್ಡ್‌ ವಿ.ವಿ ಪದವಿ ತರಗತಿಯ ಅರ್ಧದಷ್ಟು ಅಂದರೆ ಸುಮಾರು 760 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.