10ಕ್ಕೆ ಪಿಯುಸಿ ಮರು ಎಣಿಕೆ ಫಲಿತಾಂಶ

ಶನಿವಾರ, ಜೂಲೈ 20, 2019
22 °C

10ಕ್ಕೆ ಪಿಯುಸಿ ಮರು ಎಣಿಕೆ ಫಲಿತಾಂಶ

Published:
Updated:

ಬೆಂಗಳೂರು: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ ಮತ್ತು ಮರು ಎಣಿಕೆ ಫಲಿತಾಂಶವನ್ನು ಇದೇ 10ರಂದು ಶುಕ್ರವಾರ ಸಂಜೆ 4 ಗಂಟೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.ಮರು ಎಣಿಕೆ, ಮರು ಮೌಲ್ಯಮಾಪನ ನಂತರ ಅಂಕಗಳಲ್ಲಿ ಏನಾದರೂ ಬದಲಾವಣೆ ಆದರೆ ಫಲಿತಾಂಶ ಪಟ್ಟಿಯನ್ನು ಜೂನ್ 12ರಂದು ಸಂಬಂಧಪಟ್ಟ ಕಾಲೇಜುಗಳಿಗೆ ಕಳುಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಫಲಿತಾಂಶವನ್ನು ವೆಬ್‌ಸೈಟ್ ಡಿಡಿಡಿ.ಟ್ಠಛಿ.ಚ್ಟ.್ಞಜ್ಚಿ.ಜ್ಞಿ ಹೊರತುಪಡಿಸಿ ಇಲಾಖೆ ಕಚೇರಿಯಲ್ಲಿ ಪ್ರಕಟಿಸಲಾಗುವುದಿಲ್ಲ. ಅಂಕಪಟ್ಟಿಗಳನ್ನು 25ರಂದು ಆಯಾ ಕಾಲೇಜುಗಳಿಗೆ ಕಳುಹಿಸಲಾಗುವುದು. ಮರು ಮೌಲ್ಯಮಾಪನ ಮತ್ತು ಮರು ಎಣಿಕೆಯ ಫಲಿತಾಂಶದಲ್ಲಿ ಬದಲಾವಣೆಯಾದ ಎಲ್ಲ ವಿಜ್ಞಾನ ವಿದ್ಯಾರ್ಥಿಗಳ ಫಲಿತಾಂಶವನ್ನು ಇಲಾಖೆಯಿಂದ ನೇರವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು.

 

ಈ ವಿಷಯದ ಬಗ್ಗೆ ವಿದ್ಯಾರ್ಥಿಗಳು ಇಲಾಖೆಯನ್ನು ಸಂಪರ್ಕಿಸುವ ಅವಶ್ಯಕತೆ ಇಲ್ಲ. ಅಂಕಗಳಲ್ಲಿ ಬದಲಾವಣೆಯಾದ ಪಕ್ಷದಲ್ಲಿ ಪ್ರಾಧಿಕಾರದಿಂದ  ಇದೇ 12ರಂದು ರ‌್ಯಾಂಕ್ ಅನ್ನು ಪರಿಷ್ಕರಿಸಿ ಪಟ್ಟಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಪರಿಷ್ಕರಿಸಿದ ರ‌್ಯಾಂಕ್ ಅನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನೋಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry