10ರಂದು ಮಾನವ ಹಕ್ಕುಗಳ ದಿನಾಚರಣೆ

7

10ರಂದು ಮಾನವ ಹಕ್ಕುಗಳ ದಿನಾಚರಣೆ

Published:
Updated:

ರಾಯಚೂರು: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಆಶ್ರಯದಲ್ಲಿ ಇದೇ 10ರಂದು ಜಿಲ್ಲಾಡಳಿತವು ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ ಸಾವಿತ್ರಿ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮುಂಜಾನೆ 10ಕ್ಕೆ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳುವುದು. ಜಿಲ್ಲಾ ನ್ಯಾಯಾಲಯದ ಸತ್ರ ನ್ಯಾಯಾಧೀಶರಾದ ಎಸ್.ಎಚ್ ಮಿತ್ತಲಕೋಡ ಅವರು ಉದ್ಘಾಟನೆ ಮಾಡುವರು. ಅಧ್ಯಕ್ಷತೆಯನ್ನು ಶಾಸಕ ಸಯ್ಯದ್ ಯಾಸಿನ್ ವಹಿಸಲಿದ್ದಾರೆ ಎಂದರು.ಅಂದು ಮುಂಜಾನೆ 8 ಗಂಟೆಗೆ ಜಾಥಾ ನಡೆಸಲಾಗುವುದು. ಮಾನವ ಹಕ್ಕುಗಳ ರಕ್ಷಣೆ, ಮಾನವ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕಾರ್ಯಕ್ರಮಕ್ಕೆ ಸಹಕರಿಸುತ್ತಿದೆ ಎಂದು ತಿಳಿಸಿದರು.ಆಧಾರ ಯೋಜನೆ ವಿಸ್ತರಣೆ: `ಆಧಾರ' ಗುರುತಿನ ಸಂಖ್ಯೆ ಹೊಂದಿದ ಪತ್ರ ವಿತರಣೆ ಎರಡನೇ ಹಂತದ ಯೋಜನೆ ಆರಂಭಿಸಲಾಗಿದೆ. ಸದ್ಯ ರಾಯಚೂರು ನಗರದಲ್ಲಿ ಆರಂಭಿಸಲಾಗಿದೆ. ಸರ್ಕಾರದ ಯೋಜನೆಗೆ ಆಧಾರ ಮುಖ್ಯ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಈ ದಿಶೆಯಲ್ಲಿ ಜನರಿಗೆ ಮನವರಿಕೆ ಮಾಡಿ ಆಧಾರ ದೊರಕಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.ಸಂಚಾರಿ ಘಟಕ( ಮೊಬೈಲ್ ಯುನಿಟ್): ಜನತೆಗೆ, ವಿಶೇಷವಾಗಿ ಶಾಲಾ ಮಕ್ಕಳಿಗೆ ಅನುಕೂಲ ಆಗಲು ಸಂಚಾರಿ ಘಟಕ ಆರಂಭಿಸಲಾಗುತ್ತಿದೆ. ಶಾಲೆಗಳಿಂದಲೇ ಈ ಆಧಾರ ಸಂಚಾರಿ ಘಟಕ ಶುರು ಮಾಡಲಾಗುತ್ತಿದೆ. ಸದ್ಯ ರಾಯಚೂರು ನಗರದಲ್ಲಿ ಈ ಕಾರ್ಯ ನಡೆಯಲಿದೆ. ನಂತರ ಹಂತ ಹಂತವಾಗಿ ಗ್ರಾಮೀಣ ಪ್ರದೇಶ, ವಿವಿಧ ತಾಲ್ಲೂಕಿಗೆ ವಿಸ್ತರಣೆಗೊಳ್ಳಲಿದೆ. ಶಾಲಾ ಮಟ್ಟದಲ್ಲಿ ಆಧಾರ್ ಕಾರ್ಡ್ ಕೊಡುವಾಗಿ ಅದೇ ಶಾಲೆಯ ಶಿಕ್ಷಕರೊಬ್ಬರನ್ನು `ಪರಿಶೀಲಕ'ರೆಂದು ನೇಮಿಸಲಾಗುತ್ತದೆ. ಅವರೇ ಸಹಿ ಹಾಕಬೇಕಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.`ಶ್ರೀಒನ್' ಎಂಬ ತಾಂತ್ರಿಕ ಗುತ್ತಿಗೆ ಸಂಸ್ಥೆಗೆ ಈ ಆಧಾರ ಕಾರ್ಡ್ ಕೊಡಲು ಸರ್ಕಾರ ವಹಿಸಿದೆ. ಸದ್ಯ 40 ಕಿಟ್ ದೊರಕಿಸಿದೆ. ಸದ್ಯ ಇದರಲ್ಲಿ 10 ಕಿಟ್ ರಾಯಚೂರು ನಗರಕ್ಕೆ ಬಳಸಲಾಗುವುದು. 30 ಕಿಟ್ ಗ್ರಾಮೀಣ ಪ್ರದೇಶದಲ್ಲಿ ಬಳಸಿಕೊಳ್ಳಲಾಗುವುದು. ರಾಯಚೂರು ನಗರದಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ `ಆಧಾರ' ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ನಗರದ ಚತುಷ್ಪಥ ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಆಕ್ಷೇಪ, ಕೆಲ ಕಟ್ಟಡದವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಕಾಮಗಾರಿ ಚುರುಕುಗೊಳಿಸಲು ಅಡ್ಡಿಯಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry