ಸೋಮವಾರ, ಡಿಸೆಂಬರ್ 16, 2019
17 °C

10 ಅಭ್ಯರ್ಥಿಗಳು ಕಣದಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ಪುರ: ಮಹದೇವಪುರ ಕ್ಷೇತ್ರದಲ್ಲಿ ಅಂತಿಮವಾಗಿ 10 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ.

19 ನಾಮಪತ್ರಗಳು ಸಲ್ಲಿಕೆಯಾಗಿದ್ದವು. 8 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರು. ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿತ್ತು.ಎ.ಸಿ.ಶ್ರೀನಿವಾಸ್ (ಕಾಂಗ್ರೆಸ್), ಅರವಿಂದ ಲಿಂಬಾವಳಿ (ಬಿಜೆಪಿ), ಎನ್.ಗೋವರ್ದನ್ (ಜೆಡಿಎಸ್), ಎನ್.ವೆಂಕಟೇಶ್ (ಬಿಎಸ್‌ಪಿ), ಮುನಿಯಪ್ಪ (ಕೆಜೆಪಿ), ಮಯೂರ್ ಪಟೇಲ್ (ಬಿಎಸ್‌ಆರ್), ಎಂ.ಮಂಜುನಾಥ್ (ಭಾರತೀಯ ಅಂಬೇಡ್ಕರ್ ಜನತಾಪಾರ್ಟಿ), ನಾಗೇಶ್ ಟಿ., ಮುನಿರಾಜ ಪಿ., ಆರ್.ಎಲ್.ಶ್ರೀನಿವಾಸ (ಪಕ್ಷೇತರರು) ಕಣದಲ್ಲಿ ಇದ್ದಾರೆ. 299 ಮತಗಟ್ಟೆಗಳಿವೆ. 1,73,185 ಪುರುಷರು, 1,51,260 ಮಹಿಳೆಯರು ಸೇರಿದಂತೆ 3,24,525 ಮತದಾರರು ಇದ್ದಾರೆ.ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಕೃಷ್ಣರಾಜಪುರ
: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ 650 ಮತಗಟ್ಟೆ ಮತ್ತು ಉಪಮತಗಟ್ಟೆ ಅಧಿಕಾರಿಗಳಿಗೆ ಈಚೆಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಚುನಾವಣಾಧಿಕಾರಿ ಶಿವಸ್ವಾಮಿ ಮಾಹಿತಿ ನೀಡಿದರು. ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೂರ್ತಿ ಚಿತ್ರಣವನ್ನೂ ಈ ಸಂದರ್ಭದಲ್ಲಿ ತೋರಿಸಲಾಯಿತು.

ಪ್ರತಿಕ್ರಿಯಿಸಿ (+)