10 ಕೋಟಿ ವರ್ಷ ಮೊದಲೇ ಹುಟ್ಟಿದ್ದ ಚಂದ್ರ

7

10 ಕೋಟಿ ವರ್ಷ ಮೊದಲೇ ಹುಟ್ಟಿದ್ದ ಚಂದ್ರ

Published:
Updated:

ನ್ಯೂಯಾರ್ಕ್ (ಪಿಟಿಐ): ಈ ಹಿಂದೆ ಊಹಿಸಿದ್ದಕ್ಕಿಂತಲೂ  10 ಕೋಟಿ ವರ್ಷ­ಗಳ ಹಿಂದೆಯೇ ಚಂದ್ರ ರೂಪು­ಗೊಂಡಿತ್ತು ಎಂದು ಹೊಸ ಅಧ್ಯಯನ­ವೊಂದು ಹೇಳಿದೆ.ಅಂದರೆ, 440 ರಿಂದ 445 ಕೋಟಿ ವರ್ಷಗಳ ಹಿಂದೆ ಚಂದ್ರನ ಸೃಷ್ಟಿಯಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

456 ಕೋಟಿ ವರ್ಷಗಳ ಹಿಂದೆ ನಿಗೂಢ ಗ್ರಹವೊಂದು ಭೂಮಿಗೆ ಅಪ್ಪಳಿಸಿದ ಪರಿಣಾಮವಾಗಿ ಚಂದ್ರ ಸೃಷ್ಟಿ­ಯಾಯಿತು ಎಂದು ಇದುವರೆಗೆ ನಂಬಲಾಗಿತ್ತು.ಆದರೆ, ಇತ್ತೀಚೆಗೆ ಚಂದ್ರನಿಂದ ಸಂಗ್ರಹಿಸಿದ ಶಿಲೆಗಳನ್ನು ಆಧಾರವಾಗಿಟ್ಟುಕೊಂಡು ನಡೆಸಿದ ಅಧ್ಯಯನದಿಂದ  ಈ ವಿಚಾರ ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry