ಗುರುವಾರ , ಏಪ್ರಿಲ್ 22, 2021
23 °C

10 ಪೈಸೆಗೆ ಶುದ್ಧ ನೀರು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಣ: ಉತ್ತಮ ಆಹಾರದಂತೆ ಪ್ರತಿಯೊಬ್ಬರು ಶುದ್ಧೀಕರಣಗೊಂಡ ನೀರು ಕುಡಿಯಬೇಕು ಎಂದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಕಳಕಪ್ಪ ಬಂಡಿ ಹೇಳಿದರು. ಇಲ್ಲಿಯ ಬದಾಮಿ ರಸ್ತೆಯಲ್ಲಿರುವ ಪುರಸಭೆಯ ಜಲಸಂಗ್ರಹ ಮತ್ತು ಶುದ್ಧೀಕರಣ ಘಟಕದಲ್ಲಿ ಹೈದ್ರಾಬಾದ್ ಸ್ಮಾರ್ಟ್ ಅಕ್ವಾ ಟೆಕ್ನಾನಾಲಜಿಸ್ಟ್ ಪ್ರೈವೇಟ್ ಲಿ. ನಿರ್ಮಿಸಿದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಕಲುಷಿತ ನೀರಿನಿಂದ ಭೇದಿ, ಕಾಲರಾ ಮುಂತಾದ ರೋಗಗಳು ಬರುವವು. ಜೊತೆಗೆ ಸಾವನ್ನು ಅಪ್ಪುವ ಸಾಧ್ಯತೆ ಇದೆ. ಆದ್ದರಿಂದ ಜನತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು, ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕು. ಶುದ್ಧೀಕರಣಗೊಂಡ ನೀರನ್ನೇ ಕುಡಿಯಬೇಕು’ ಎಂದರು.ಹೈದ್ರಾಬಾದ್ ಸ್ಮಾಟ್ ಸಾಮಾಜಿಕ ಶುದ್ಧ ನೀರಿನ ಕೆಂದ್ರ ವ್ಯವಸ್ಥಾಪಕ ಡಿ.ರಾಘವೇಂದ್ರ ಮಾತನಾಡಿ, ‘ಪ್ರತಿ ಲೀಟರ್ ನೀರಿಗೆ 10 ಪೈಸೆಯಂತೆ ಶುದ್ಧಗೊಳಿಸಿದ ನೀರನ್ನು ಪಟ್ಟಣದ ಜನತೆಗೆ ವಿತರಿಸಲಾಗುವುದು. ಜನತೆ ಅಗತ್ಯ ತಕ್ಕಂತೆ ನೀರನ್ನು ಪಡೆಯಬೇಕು ತಾಂತ್ರಿಕ, ಸಾಂಕೇತಿಕವಾಗಿ ನೀರಿನ ಶುದ್ಧೀಕರಣ ಘಟಕದ ಮೂಲಕ ನಗರದಲ್ಲಿ ಶುದ್ಧ ನೀರು ಪೂರೈಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.ಅಶೋಕ ನವಲಗುಂದ, ವೀರೇಶ ದೊಡ್ಡಣ್ಣವರ, ಜಗದೀಶಪ್ಪ ಹುಗ್ಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಸುಮಂಗಲಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುತ್ತಣ್ಣ ಸಂಗಳದ, ಡಾ.ಆನಂದ ಇನಾಮದಾರ, ಗುರುರಾಜ ಕುಲಕರ್ಣಿ, ವಿಶ್ವನಾಥ ಜಿಡ್ಡಿಬಾಗಿಲ, ರವಿ ಸಂಗನಬಶೆಟ್ಟಿ, ಮಾಲೀಪಾಟೀಲ, ಸುರೇಶ ಜಗ್ಗಲ, ಅರ್ಜುನ ಕೊಪ್ಪಳ, ಶಿವಾನಂದ ಜಿಡ್ಡಿಬಾಗಿಲ, ವೈ.ವಿ.ಪಲ್ಲೇದ, ಹಿರಿಯಪ್ಪ ಹಲಗಿ, ಕಳಕಪ್ಪ ಸಂತೋಜಿ, ಆರ್.ಎಲ್.ಮಾಳಗೌಡ್ರ, ಪರ್ವಗೌಡ ಪೊಲೀಸ್‌ಪಾಟೀಲ, ಅಶೋಕ ಹಕಾರಿ, ಅಶೋಕ ಪವಾಡಶಟ್ರ, ಮಲ್ಲಿಕಾರ್ಜುನ ಕಿರೇಸೂರ, ಬಸವಂತಪ್ಪ ತಳವಾರ, ಡಾ.ಶಶಿಧರ ಹಟ್ಟಿ, ಅಮೃತಗೌಡ ಗೌಡರ, ಮಲ್ಲಪ್ಪ ಕೊಪ್ಪದ, ವಿಜಯ ಸಜ್ಜನರ, ಹೂವಪ್ಪ ಮೂಲಿಮನಿ, ಬಸವರಾಜ ರಂಗನಗೌಡ್ರ, ಮುಖ್ಯಾಧಿಕಾರಿ ಎಫ್.ಟಿ. ಶಂಕ್ರಪ್ಪ, ಶಂಕ್ರಪ್ಪ ದೊಡ್ಡಣ್ಣವರ, ಆರ್.ಎಸ್. ಹೊಸಮನಿ, ಮುಂತಾದವರು ಉಪಸ್ಥಿತರಿದ್ದರು. ಮುತ್ತಣ್ಣ ಲಿಂಗನಗೌಡ್ರ ಸ್ವಾಗತಿಸಿದರು. ಎಂಜಿನಿಯರ್ ವಿ.ಬಿ. ಸಂಕನಗೌಡ್ರ, ನಿರೂಪಿಸಿದರು. ಎಂ.ಎಂ. ಗಾಣಿಗೇರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.