10 ವರ್ಷಗಳಲ್ಲಿ ದುಪ್ಪಟ್ಟಾದ ಜನಸಂಖ್ಯೆ

7

10 ವರ್ಷಗಳಲ್ಲಿ ದುಪ್ಪಟ್ಟಾದ ಜನಸಂಖ್ಯೆ

Published:
Updated:

ಬೆಂಗಳೂರು: ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 47.19 ಲಕ್ಷದಷ್ಟು ಏರಿಕೆಯಾಗಿದೆ. ದೇಶದ ವಿವಿಧ ಮಹಾನಗರಗಳಲ್ಲಿ ಒಂದು ದಶಕದಲ್ಲಿ ಆಗಿರುವ ಏರಿಕೆಗೆ ಹೋಲಿಸಿದರೆ ನಗರದ ಜನಸಂಖ್ಯೆ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.2011ನೇ ಸಾಲಿನ ಜನಗಣತಿಗೆ ಸಂಬಂಧಿಸಿದ ಅಂಕಿ-ಅಂಶಗಳ ಪ್ರಕಾರ ನಗರದ ಕೆಲ ಹೊರವಲಯಗಳೂ ಸೇರಿದಂತೆ ಒಟ್ಟು ಜನಸಂಖ್ಯೆ 84.99 ಲಕ್ಷ. ಹತ್ತು ವರ್ಷಗಳ ಹಿಂದೆ 57.01 ಲಕ್ಷದಷ್ಟಿದ್ದ ನಗರದ ಒಟ್ಟು ಜನಸಂಖ್ಯೆ ಈಗ 84.25 ಲಕ್ಷಕ್ಕೆ ಏರಿಕೆಯಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಪುರುಷರ ಸಂಖ್ಯೆ 44.01 ಲಕ್ಷವಾದರೆ, ಮಹಿಳೆಯರ ಸಂಖ್ಯೆ 40.24 ಲಕ್ಷ ಮಾತ್ರ. ಸರಾಸರಿ ಸಾಕ್ಷರತೆ ಶೇ 89.59. ಇದರಲ್ಲಿ ಪುರುಷರ ಸಾಕ್ಷರತೆ ಶೇ 92.63 ಆದರೆ ಮಹಿಳೆಯರ ಸಾಕ್ಷರತೆ ಶೇ 86.25.10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ರಾಜ್ಯದ ಏಕೈಕ ನಗರ ಬೆಂಗಳೂರು. ನಂತರದ ಸ್ಥಾನದಲ್ಲಿರುವ ಹುಬ್ಬಳ್ಳಿ-ಧಾರವಾಡ ನಗರದ ಜನಸಂಖ್ಯೆ 9.43 ಲಕ್ಷ ಮಾತ್ರ. ಮುಂಬೈ, ನವದೆಹಲಿ, ಕೋಲ್ಕತ್ತ ಮತ್ತು ಚೆನ್ನೈ ಹೊರತುಪಡಿಸಿದರೆ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರ ಎಂಬ ಪಟ್ಟವೂ ಬೆಂಗಳೂರಿಗೇ ಸಂದಿದೆ.ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರಗಳ ಸಂಖ್ಯೆ ನೆರೆಯ ರಾಜ್ಯಗಳಲ್ಲಿ ಹೆಚ್ಚಿವೆ. ಕೇರಳದ ಏಳು ನಗರಗಳ ಜನಸಂಖ್ಯೆ ಹತ್ತು ಲಕ್ಷಕ್ಕಿಂತ ಹೆಚ್ಚಿದ್ದರೆ, ತಮಿಳುನಾಡಿನಲ್ಲಿ ನಾಲ್ಕು ನಗರಗಳ ಜನಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚಿದೆ. ಆಂಧ್ರದ ಮೂರು ನಗರಗಳು ಈ ಪಟ್ಟಿಗೆ ಸೇರುತ್ತವೆ.ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ನಗರಗಳ ಪೈಕಿ ಗ್ರೇಟರ್ ಮುಂಬೈ (1.84 ಕೋಟಿ) ಮತ್ತು ನವದೆಹಲಿ (1.64 ಕೋಟಿ) ಮೊದಲ ಎರಡು ಸ್ಥಾನಗಳಲ್ಲಿವೆ. 2001 ಜನಗಣತಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಕೋಲ್ಕತ್ತ ಈ ಬಾರಿ ಮೂರನೆಯ ಸ್ಥಾನದಲ್ಲಿದೆ. ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರಗಳ ಸಂಖ್ಯೆ ದೇಶದಲ್ಲಿ ಒಟ್ಟು 53.

2011ರ ಜನಗಣತಿ ಪ್ರಕಾರ ಪ್ರಥಮ ದರ್ಜೆ ನಗರಗಳ ಪಟ್ಟಿಗೆ ರಾಜ್ಯದಲ್ಲಿ ಎರಡು ನಗರಗಳು ಹೊಸದಾಗಿ ಸೇರ್ಪಡೆಯಾಗಿವೆ. ಬಾಗಲಕೋಟೆ ಮತ್ತು ರಾಣೆಬೆನ್ನೂರು ನಗರಗಳ ಜನಸಂಖ್ಯೆ ಒಂದು ಲಕ್ಷಕ್ಕಿಂತ ಹೆಚ್ಚಿರುವ ಕಾರಣ ಅವುಗಳನ್ನು ಪ್ರಥಮ ದರ್ಜೆ ನಗರಗಳ ಪಟ್ಟಿಗೆ ಸೇರಿಸಲಾಗಿದೆ. 2001ರಲ್ಲಿ ರಾಜ್ಯದಲ್ಲಿ 24 ಪ್ರಥಮ ದರ್ಜೆ ನಗರಗಳಿದ್ದವು. 2001ರ ಜನಗಣತಿ ಪ್ರಕಾರ ದೇಶದಲ್ಲಿ 394 ಪ್ರಥಮ ದರ್ಜೆ ನಗರಗಳಿದ್ದವು, 2011ರಲ್ಲಿ ಇವುಗಳ ಸಂಖ್ಯೆ 468ಕ್ಕೆ ಏರಿದೆ.ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರಗಳು

ಬೆಳಗಾವಿ, ಬಾಗಲಕೋಟೆ, ವಿಜಾಪುರ, ಬೀದರ್, ರಾಯಚೂರು, ಗಂಗಾವತಿ, ಗದಗ-ಬೆಟಗೇರಿ, ಹುಬ್ಬಳ್ಳಿ-ಧಾರವಾಡ, ರಾಣೆಬೆನ್ನೂರು, ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಉಡುಪಿ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ನಗರ, ಮಂಡ್ಯ, ಹಾಸನ, ಮಂಗಳೂರು, ಮೈಸೂರು, ಗುಲ್ಬರ್ಗ, ಕೋಲಾರ, ರಾಬರ್ಟ್‌ಸನ್‌ಪೇಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry