ಗುರುವಾರ , ಜುಲೈ 29, 2021
26 °C
ಸರ್ಕಾರದ ನಿರ್ಲಕ್ಷ್ಯ: ರೈತ ಸಂಘ ಆರೋಪ

10 ವರ್ಷದಲ್ಲಿ 2.40 ಲಕ್ಷ ರೈತರು ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು:  ಕೃಷಿ ಕ್ಷೇತ್ರವನ್ನು ಸರ್ಕಾರ ಕಡೆಗಣಿಸಿದ ಪರಿಣಾಮ ಕಳೆದ 10 ವರ್ಷಗಳಲ್ಲಿ 2.40 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಸಂಚಾಲಕ ಎನ್.ಆರ್.ರವಿಚಂದ್ರರೆಡ್ಡಿ ಆರೋಪಿಸಿದರು.ಜೂ.28ರಂದು ಕರ್ನಾಟಕ ಪ್ರಾಂತ ರೈತ ಸಂಘದ 8ನೇ ತಾಲ್ಲೂಕು ಸಮ್ಮೇಳನವನ್ನು ಪಟ್ಟಣದ ಉತ್ತರ ಪಿನಾಕಿನಿ ನದಿ ದಡದ ಆಂಜನೇಯ ದೇಗುಲದಲ್ಲಿ ಆಯೋಜಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ತಾಲ್ಲೂಕಿನಲ್ಲಿ ಕಳೆದ 25 ವರ್ಷಗಳಿಂದ ಕರ್ನಾಟಕ ಪ್ರಾಂತ ರೈತ ಸಂಘ ರೈತರ ಭೂಮಿಗಾಗಿ, ಶಾಶ್ವತ ನೀರಾವರಿಗಾಗಿ, ಕಬ್ಬು ಬೆಳೆಗಾರರ ಬಾಕಿ ಹಣಕ್ಕೆ, ರಸಗೊಬ್ಬರ, ವಿದ್ಯುತ್‌ಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಈ ಸಮ್ಮೇಳನದಲ್ಲಿ ವಿವಿಧ ಜಿಲ್ಲೆಗಳಿಂದ 300 ರಿಂದ 500 ರೈತ ಪ್ರತಿನಿಧಿಗಳು, ಜಿಲ್ಲಾ ಮತ್ತು ರಾಜ್ಯ ಮುಖಂಡರು, ಕೃಷಿ ತಜ್ಞರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪ್ರತಿಕಾಗೋಷ್ಠಿಯಲ್ಲಿ ತಾಲ್ಲೂಕು ಪ್ರಾಂತ ರೈತ ಸಂಘದ ಸಹ ಸಂಚಾಲಕ ಹೊಸೂರು ತಿಪ್ಪಣ್ಣ, ಪದಾಧಿಕಾರಿಗಳಾದ ಅನ್ವರ್‌ಬಾಷಾ, ನಲ್ಲಪ್ಪ, ಮೋಹನ್, ಕೃಷ್ಣ, ಜಗದೀಶ್, ಶ್ರೀರಾಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.