10 ಸಾವಿರ ಮೀ. ಓಟದಲ್ಲಿ ಚಿನ್ನ ಗೆದ್ದ ಹೊಸಮನಿ

7
ಅಥ್ಲೆಟಿಕ್ಸ್: ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಚಾಲನೆ

10 ಸಾವಿರ ಮೀ. ಓಟದಲ್ಲಿ ಚಿನ್ನ ಗೆದ್ದ ಹೊಸಮನಿ

Published:
Updated:
10 ಸಾವಿರ ಮೀ. ಓಟದಲ್ಲಿ ಚಿನ್ನ ಗೆದ್ದ ಹೊಸಮನಿ

ಕೋಲಾರ: ಬಾಗಲಕೋಟೆಯ ಎನ್.ಬಿ.ಹೊಸಮನಿ ಇಲ್ಲಿ ನಡೆಯುತ್ತಿರುವ 34ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಅನನ್ಯ ಸಾಧನೆ ತೋರಿದರು. ಶನಿವಾರ ಇವರು 75ವರ್ಷ ವಯಸ್ಸಿನವರ ವಿಭಾಗದ 10,000 ಮೀಟರ್ಸ್ ರಸ್ತೆ ಓಟದ ಸ್ಪರ್ಧೆಯಲ್ಲಿ ಮೊದಲು ಗುರಿ ಮುಟ್ಟಿ ಎಲ್ಲರ ಮೆಚ್ಚುಗೆ ಗಳಿಸಿದರು.ತಾಲ್ಲೂಕಿನ ಬೆಳ್ಳಂಬರಿ ಗ್ರಾಮದಲ್ಲಿ ಬೆಳಿಗ್ಗೆ 7ರ ವೇಳೆಗೆ ಶುರುವಾದ ಓಟದಲ್ಲಿ ಪಾಲ್ಗೊಂಡ ಅವರು, ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯ ಗೆಲುವಿನ ಗೆರೆಯನ್ನು ದಾಟಲು 1ಗಂಟೆ15:00 ನಿಮಿಷಗಳನ್ನು ತೆಗೆದುಕೊಂಡರು.

ಅವರಿಗೆ ತೀವ್ರ ಪೈಪೋಟಿ ನೀಡಿದ ಚಿಕ್ಕಬಳ್ಳಾಪುರದ ಡಿ.ನಾರಾಯಣಸ್ವಾಮಿ 1:30:57:24 ನಿಮಿಷದಲ್ಲಿ ಗುರಿಮುಟ್ಟಿ ಎರಡನೇ ಸ್ಥಾನ ಪಡೆದರು. ಅದೇ ರೀತಿ , 70 ದಾಟಿದವರ ವಿಭಾಗದಲ್ಲಿಯೂ ಆರ್.ಎಚ್.ಹಿರೇಗಂಗಣ್ಣನವರ ಮತ್ತು ಮೈಸೂರಿನ ಎನ್.ವಿ.ಶಿವಣ್ಣ ಮೊದಲ ಎರಡು ಸ್ಥಾನ ಗಳಿಸಿದರು. 85 ದಾಟಿದವರ ವಿಭಾಗದ 800 ಮೀ. ಓಟದ ಸ್ಪರ್ಧೆಯಲ್ಲಿ ಧಾರವಾಡದ ಚಂದ್ರಶೇಖರ ಬೆಂಡಿ ಏಕೈಕ ಸ್ಪರ್ಧಿಯಾಗಿ ಗಮನ ಸೆಳೆದರು.ಮೊದಲ ದಿನದ ಫಲಿತಾಂಶೆ:

ಪುರುಷರ ವಿಭಾಗ:
10 ಸಾವಿರ ಮೀ. ರಸ್ತೆ ಓಟ: 35ವರ್ಷಕ್ಕೂ ಮೇಲ್ಪಟ್ಟವರ ವಿಭಾಗ: ಎಸ್.ರಮೇಶ (ಕೋಲಾರ)-1 ಹರಿಕೃಷ್ಣ (ಬೆಂಗಳೂರು)-2,  40ವರ್ಷ ವಯಸ್ಸಿಗೂ ಮೇಲ್ಪಟ್ಟವರು: ಸುರೇಶಚಂದ್ರ (ಬೆಂಗಳೂರು)-1, ಸಿ.ವಿ.ಪಟಗಾರ (ಧಾರವಾಡ)-2, ಭೀಮಶಂಕರ (ಉಡುಪಿ)-3; 45ವರ್ಷಕ್ಕೂ ಮೇಲ್ಪಟ್ಟವರು: ಥಾಮಸ್ ಬಾಬಿ ಫಿಲಿಪ್ (ಬೆಂಗಳೂರು)-1; 50ವರ್ಷಕ್ಕೂ ಮೇಲ್ಪಟ್ಟವರು: ಪಿ.ಡಿ.ಹುನಗುಂದ (ಧಾರವಾಡ)-1, ಬರಲು ಪ್ರಕಾಶ, (ಹಾಸನ)-2, ಎನ್.ರಾಮಸ್ವಾಮಿ (ಬೆಂಗಳೂರು)-3, 55+ ಕೆ.ಸಿ.ಕೋದಂಡಪಾಣಿ (ಬೆಂಗಳೂರು)-1, ಬಿ.ಎಸ್.ಹಿರೇಗೌಡರ, ಹುಬ್ಬಳಿ-2, ಕೆ.ಬಸಪ್ಪಯ್ಯ, ಶಿವಮೊಗ್ಗ-3, 60+ ಕೆ.ಮಂಜುನಾಥ, ಹೊಸಕೋಟೆ-1, ಸಿ.ಎಚ್. ಕೋಡಿಹಳ್ಳಿ, ಹಾವೇರಿ-2, 65+ ಪುಟ್ಟಸ್ವಾಮಿ, ಬೆಂಗಳೂರು-1, ವಿ.ಎ.ನಾರಾಯಣ, ಬೆಂಗಳೂರು-2, ವೆಂಕಟರಮಣ ಕೃಷ್ಣನ್-3.ಮಹಿಳೆಯರ ವಿಭಾಗ

5 ಸಾವಿರ ಮೀ. ಓಟ
: 35+ ಮೀರಾ ಕತ್ವಾಲ-1, ಭೂಮಿಕಾ ಪಟೇಲ್-2 (ಇಬ್ಬರೂ ಬೆಂಗಳೂರಿನವರು), ಎಚ್.ಎನ್.ಛಾಯಾದೇವಿ, ಹಾಸನ-3, 40+ ಶಾರದಾ, ಹಾಸನ-1,  ಕೆ.ಪೂರ್ಣಿಮಾ, ಉಡುಪಿ-2; 45+ ಪಿ.ಎಂ.ಶೈಲಜಾ, ಕೊಡಗು-1, ಎಚ್.ಕೆ.ಪುಷ್ಪಾ, ಹಾಸನ-2, ಸುನಂದಾ ಶೆಣೈ, ಉಡುಪಿ-3, 50+ ಸುಲತಾ ಕಾಮತ್, ಉಡುಪಿ-1, ವಿ.ಎನ್.ವಿಶಾಲಾಕ್ಷಿ, ಕೊಡಗು-2, ಪ್ರಭಾವತಿ, ಹೊಸಕೋಟೆ-3, 55+ ಶಾರದಾ, ಬೆಂಗಳೂರು-1, 60+ ಅರುಣಕಲಾ ಎಸ್. ರಾವ್, ಉಡುಪಿ-1, ಪೂಜಮ್ಮ, ಹೊಸಕೋಟೆ-2, ಮುಕ್ತಾ, ಬೆಂಗಳೂರು-3, 65 + ಟಿ.ವಿ.ಲಲಿತಮ್ಮ, ಬೆಂಗಳೂರು-1.100 ಮೀ. ಓಟ: 75ವರ್ಷ ವಯಸ್ಸಿನವರ ವಿಭಾಗ: ಸೀತಾ, ಬೆಂಗಳೂರು-1. 70ವರ್ಷ: ಸುಶೀಲಾ, ಬೆಂಗಳೂರು-1, 65ವರ್ಷ: ಪಾರ್ವತಿ ಕಾಂತರಾಜ, ಮೈಸೂರು-1, ವೀಣಾ ಎಸ್ ಗುಮಾಸ್ತೆ, ಬೆಳಗಾವಿ-2, ಉಮಾದೇವಿ, ಬೆಂಗಳೂರು-3; 60ವರ್ಷ: ಮುಕ್ತ, ಬೆಂಗಳೂರು-1, ವಿ.ಅನ್ನಪೂರ್ಣ, ಮೈಸೂರು-2, ಉಷಾ ಶೇಖರಪ್ಪ, ಬೆಂಗಳೂರು-3; 55+ ಕಮಲ ಬೆಂಗಳೂರು-1, ಮೀರಾನಾಯಕ, ಉಡುಪಿ-2, ಪಿ.ಕೆ.ರೋಸಮ್ಮ, ಮೈಸೂರು-3; 50 ವರ್ಷ: ಎಸ್.ಎಂ.ವಿಶಾಲಾಕ್ಷಿ, ದಾವಣಗೆರೆ-1, ಜೆ.ಆರ್.ಅನ್ನಪೂರ್ಣ, ಬೆಂಗಳೂರು-2, ಎಸ್.ನಿರ್ಮಲಾ ನಾಯಕ, ಉಡುಪಿ-3; 45 ವರ್ಷ; ವಿದ್ಯಾ, ಉಡುಪಿ-1, ವಿನುತಾ, ಮಂಗಳೂರು-2, ಜ್ಯೋತಿ, ಉಡುಪಿ-3; 40ವರ್ಷ: ಪಿ.ಶಾಂತಿ-1, ಗ್ರೇಟ್ಟಾ-2, ಶೈಜಾ ಮ್ಯಾಥ್ಯು-3 (ಮೂವರೂ ಉಡುಪಿಯವರು); 35ವರ್ಷ: ಆಶಾ, ಮೈಸೂರು-1, ಕೀರ್ತನಾ, ಬೆಂಗಳೂರು-2, ಶಾಲಿನಿ, ಉಡುಪಿ-3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry