ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಎಂಬಿಬಿಎಸ್‌ ಸೀಟು ಹೆಚ್ಚಳಕ್ಕೆ ಒಪ್ಪಿಗೆ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ವೈದ್ಯ–ರೋಗಿ ಅನುಪಾತ ಬಹಳ ಕಡಿಮೆ ಇದೆ.  ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಮುಂದಿನ ಐದು ವರ್ಷಗಳ ಅವಧಿ­ಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 10,000 ಎಂಬಿಬಿಎಸ್‌ ಸೀಟು­ಗಳನ್ನು ಹೆಚ್ಚಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಇದಕ್ಕೆ ಸರ್ಕಾರಕ್ಕೆ ಸುಮಾರು ₨ 10 ಸಾವಿರ ಕೋಟಿ ವೆಚ್ಚ ತಗಲುತ್ತದೆ. ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಸೀಟುಗಳನ್ನು ಹೆಚ್ಚಿಸ­ಲಾಗು­ವುದು. ದೇಶದಲ್ಲಿ ಈಗ ಒಟ್ಟು 381 ವೈದ್ಯಕೀಯ ಕಾಲೇಜುಗಳಲ್ಲಿ 49,918 ವೈದ್ಯಕೀಯ ಸೀಟುಗಳಿವೆ. ಅವುಗಳಲ್ಲಿ ಶೇ 50ರಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಕಾಲೇಜುಗಳಲ್ಲಿ ಇವೆ.

ಪ್ರಸ್ತುತ ಭಾರತದಲ್ಲಿ 2 ಸಾವಿರ ರೋಗಿಗಳಿಗೆ ಒಬ್ಬರು ವೈದ್ಯರಿದ್ದಾರೆ. ಒಂದು ಸಾವಿರ ರೋಗಿಗಳಿಗೆ ಒಬ್ಬರು ವೈದ್ಯರು ಇರುವಂತೆ ನೋಡಿಕೊಳ್ಳುವುದು ಎಂಬಿ­ಬಿಎಸ್‌ ಸೀಟುಗಳ ಹೆಚ್ಚಳದ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT