`100 ಕೋಟಿ ತೆರಿಗೆ ವಂಚನೆ!

7

`100 ಕೋಟಿ ತೆರಿಗೆ ವಂಚನೆ!

Published:
Updated:

ನವದೆಹಲಿ (ಪಿಟಿಐ): ಮುಂಬೈ ಮೂಲದ ಪವನ ವಿದ್ಯುತ್‌ ಉತ್ಪಾದನೆ ಮತ್ತು ಯಂತ್ರಗಳ ಸರಬರಾಜು ಕಂಪೆನಿಯೊಂದು  ಸರ್ಕಾರಕ್ಕೆ ಸುಮಾರು ನೂರು ಕೋಟಿ ರೂಪಾಯಿ ಸೇವಾ ತೆರಿಗೆಯನ್ನು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ತಮಗೆ ದೊರೆತ ಖಚಿತ ಸುಳಿವಿನ ಮೇಲೆ ಕೇಂದ್ರ ಅಬಕಾರಿ ಜಾಗೃತದಳದ ಅಧಿಕಾರಿಗಳು  ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಇರುವ ಕಂಪೆನಿಯ ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.ಏಪ್ರಿಲ್‌ 2012ರಿಂದ ಮೇ 2013ರವರೆಗಿನ ಅವಧಿಯಲ್ಲಿ ಗಾಳಿ ಯಂತ್ರ ಪೂರೈಸಿದ ಗ್ರಾಹಕ ಸಂಸ್ಥೆಗಳಿಂದ ಸಂಪೂರ್ಣ ಸೇವಾ ತೆರಿಗೆ ಸಂಗ್ರಹಿ ಸಿದ್ದರೂ ಅದನ್ನು ಸರ್ಕಾರಕ್ಕೆ ಪಾವತಿಸಿರಲಿಲ್ಲ ಎನ್ನಲಾಗಿದೆ.ಕರ್ನಾಟಕ, ಮಹಾರಾಷ್ಟ್ರ, ತಮಿಳು ನಾಡು, ಆಂಧ್ರಗಳಲ್ಲಿ ಈ ಕಂಪೆ ನಿಯ ಗಾಳಿ ವಿದ್ಯುತ್‌ ಉತ್ಪಾದನಾ ಘಟಕಗಳಿರು­ವುದು ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳಿಂದ ಬಹಿರಂಗವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry