100 ಕೋಟಿ ಬ್ಯಾಂಕ್ ಖಾತರಿ ನೀಡಲು ಡಿಸಿಎಚ್‌ಎಲ್‌ಗೆ ಸೂಚನೆ

7

100 ಕೋಟಿ ಬ್ಯಾಂಕ್ ಖಾತರಿ ನೀಡಲು ಡಿಸಿಎಚ್‌ಎಲ್‌ಗೆ ಸೂಚನೆ

Published:
Updated:

ಮುಂಬೈ (ಪಿಟಿಐ): ಷರತ್ತು ರಹಿತ ಹಾಗೂ ಹಿಂಪಡೆಯಲಾಗದ ರೀತಿಯಲ್ಲಿ ಬಿಸಿಸಿಐಗೆ ಅಕ್ಟೋಬರ್ 9ರೊಳಗೆ ನೂರು ಕೋಟಿ ರೂಪಾಯಿ ಬ್ಯಾಂಕ್ ಖಾತರಿ ನೀಡುವಂತೆ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ (ಡಿಸಿಎಚ್‌ಎಲ್) ಬಾಂಬೆ    ಹೈಕೋರ್ಟ್ ಸೂಚಿಸಿದೆ.ಅಷ್ಟು ಮಾತ್ರವಲ್ಲದೇ, ಐಪಿಎಲ್ ತಂಡ ಡೆಕ್ಕನ್ ಚಾರ್ಜರ್ಸ್ ಜೊತೆಗಿನ ಒಪ್ಪಂದವನ್ನು ಬಿಸಿಸಿಐ ಇಷ್ಟುಬೇಗ ರದ್ದು ಮಾಡಿದ್ದು ದುಡುಕಿನ ಕ್ರಮ ಎಂದು ನ್ಯಾಯಾಲಯ ಹೇಳಿದೆ.ಚೆನ್ನೈಯಲ್ಲಿ ಹೋದ ತಿಂಗಳು ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಜೊತೆಗಿನ ಒಪ್ಪಂದ ರದ್ದು ಮಾಡಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಈ ತಂಡದ ಫ್ರಾಂಚೈಸಿ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry