104 ಮನೆ ಹಂಚಿಕೆ:ಸೂಚನೆ

7

104 ಮನೆ ಹಂಚಿಕೆ:ಸೂಚನೆ

Published:
Updated:

ಕೊಪ್ಪಳ:  ನಗರದ ಸರ್ವೆ ನಂ. 438 ರ 5 ಎಕರೆ 6 ಗುಂಟೆ ಸ್ಥಳದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಐ.ಹೆಚ್.ಎಸ್.ಡಿ.ಪಿ. ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ನಿರ್ಮಿತಿ ಕೇಂದ್ರದವರು ನಿರ್ಮಿಸಿದ 104 ಮನೆಗಳನ್ನು ಈ ಕೆಳಗಿನ ನಿಬಂಧನೆಗಳಂತೆ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.ಆರ್ಥಿಕವಾಗಿ ಹಿಂದುಳಿದವರು ಅರ್ಜಿಗಳನ್ನು ಸಲ್ಲಿಸಲು ಅರ್ಹರಿರುತ್ತಾರೆ. ವಾರ್ಷಿಕ ಆದಾಯ ರೂ 32,000 ಮೀರಿರಬಾರದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದೊಂದಿಗೆ ಆದಾಯದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.  ಮನೆಯನ್ನು ಪಡೆದವರು ಮನೆಯನ್ನು ಬೇರೆ ಯಾರಿಗೂ ಒಳಬಾಡಿಗೆ ಕೊಡತಕ್ಕದ್ದಲ್ಲ; ಮಾರತಕ್ಕದ್ದಲ್ಲ. ಅಡವು ಹಾಕತಕ್ಕದ್ದಲ್ಲ ಅಥವಾ ಅದರ ತಮ್ಮ ಹಕ್ಕುಗಳನ್ನು ಬೇರೆಯವರಿಗೆ ವರ್ಗಾಯಿಸಬಾರದು.ಮನೆಯ ನವೀಕರಣ ಬಯಸಿದಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯಬಹುದಾಗಿದೆ, ಅರ್ಜಿದಾರರ ಕುಟುಂಬದ ವಿವರವನ್ನು ಈ ಕೆಳಗಿನಂತೆ ನೀಡುವುದು. ಗಂಡ, ಹೆಂಡತಿ, 25 ವರ್ಷದವರೆಗಿನ ಮದುವೆಯಾದ, ಮದುವೆಯಾಗದಿರುವ ಮಕ್ಕಳು ಇದ್ದಲ್ಲಿ ವಿವರ ನೀಡುವುದು, 60 ವರ್ಷಗಳಿಗಿಂತ ಮೇಲ್ಪಟ್ಟ ವಯೋವೃದ್ಧ ಪುರುಷರು, ಮಹಿಳೆಯರು, 18 ವರ್ಷಗಳಿಗಿಂತ ಮೇಲ್ಪಟ್ಟ ವಯಸ್ಸಿನ ವಿಧವೆಯರು ಹಾಗೂ ಮರುಮದುವೆ ಮಾಡಿಕೊಳ್ಳದಿದ್ದವರನ್ನು ಹೊರತುಪಡಿಸಿ ಸಂಸಾರಸ್ಥರಲ್ಲದವರಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದಿಲ್ಲ.ಅರ್ಜಿದಾರರ ಹೆಸರಲ್ಲಾಗಲಿ, ಅವರ ಕುಟುಂಬದ ಸದಸ್ಯರ, ನೆಂಟರ ಹೆಸರಿನಲ್ಲಿ ಮನೆ ಅಥವಾ ನಿವೇಶನಗಳನ್ನು ಸರ್ಕಾರದ ವತಿಯಿಂದ, ಸ್ವಂತವಾಗಿ ಹೊಂದಿದ್ದಲ್ಲಿ ವಿವರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.ಮೇಲೆ ನಮೂದಿಸಿದ ಷರತ್ತುಗಳ ಪೈಕಿ ಯಾವುದನ್ನಾದರೂ ಉಲ್ಲಂಘಿಸಿದರೆ ಮನೆ ಹಂಚಿಕೆಯನ್ನು ಯಾವುದೇ ಪರಿಹಾರ ಕೊಡದೆ ರದ್ದುಗೊಳಿಸುವ ಹಾಗೂ ಮನೆಯನ್ನು ಪುನಃ ವಶಕ್ಕೆ ಪಡೆಯುವ ಹಕ್ಕನ್ನು ಮಂಡಳಿ ಕಾಯ್ದಿರಿಸಿದೆ, ಮನೆಯ ಹಂಚಿಕೆ ಮಾಡಿದ ಫಲಾನುಭವಿಗಳಿಗೆ ಬಯೋಮೆಟ್ರಿಕ್ ಕಾರ್ಡ್‌ಗಳನ್ನು ವಿತರಿಸಿ ಒಂದು ವರ್ಷದ ನಂತರ ನಿಯಮಾನುಸಾರ ನೊಂದಣಿ ಮಾಡಿಕೊಳ್ಳಲಾಗುವುದು.ಸದರಿ ಮನೆಗಳನ್ನು ವಾಸಕ್ಕಾಗಿ ಮಾತ್ರ ಉಪಯೋಗಿಸಬೇಕು. ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಫಲಾನುಭವಿಗಳು ಕೊಪ್ಪಳ ನಗರದ ನಿವಾಸಿಗಳಾಗಿರಬೇಕು (ರಹವಾಸಿ ಪ್ರಮಾಣ ಪತ್ರ ಲಗತ್ತಿಸುವುದು). ಅರ್ಜಿ ಶುಲ್ಕ ಪರಿಶಿಷ್ಟ ಜಾತಿ, ಪಂಗಡದವರಿಗೆ ರೂ. 50 ಹಾಗೂ ಇತರರಿಗೆ ರೂ. 100 ನಿಗದಿಪಡಿಸಲಾಗಿದೆ.  ಅರ್ಜಿ ಶುಲ್ಕವನ್ನು ಪೋಸ್ಟಲ್ ಆರ್ಡರ್ ಮೂಲಕ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಉಪವಿಭಾಗ, ಗದಗ ಇವರ ಹೆಸರಿನಲ್ಲಿ ಪಡೆದು, ನಿಗದಿತ ಅರ್ಜಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿ. 18 ರವರೆಗೆ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಡಿ. 19ರಿಂದ ಜ. 3ರವರೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ರೂ 13,500 ಹಾಗೂ ಇನ್ನುಳಿದ ವರ್ಗದವರು ರೂ 16,200ಗಳ ಮೊತ್ತದ ರಾಷ್ಟ್ರೀಕೃತ ಬ್ಯಾಂಕಿನ ಡಿ.ಡಿ.ಯನ್ನು ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ, ಗದಗ ಉಪ-ವಿಭಾಗ ಗದಗ ಇವರ ಹೆಸರಿನಲ್ಲಿ ಅರ್ಜಿಯೊಂದಿಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಲ್ಲಿಸಬೇಕು.ಹಂಚಿಕೆ ಮಾಡಲು ಬಾಕಿ ಇರುವ 104 ಮನೆಗಳ ಪೈಕಿ ಹೆಚ್ಚು ಅರ್ಜಿ ಬಂದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಹಂಚಿಕೆ ಆಗದ ಅರ್ಜಿದಾರರ ಡಿ.ಡಿ. ಗಳನ್ನು ಯಾವುದೇ ಬಡ್ಡಿ ಇಲ್ಲದೆ ಹಿಂದಿರುಗಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry