ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

106 ಹೊಸ ರೈಲುಗಳು

Last Updated 26 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ: (ಪಿಟಿಐ/ಐಎಎನ್‌ಎಸ್):  ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ 67 ಎಕ್ಸ್‌ಪ್ರೆಸ್ ಹಾಗೂ 26 ಪ್ರಯಾಣಿಕರ ರೈಲು ಸೇರಿ 106 ಹೊಸ ರೈಲುಗಳನ್ನು ಪ್ರಕಟಿಸಲಾಗಿದೆ.

ಹೊಸ ಎಕ್ಸ್‌ಪ್ರೆಸ್ ರೈಲುಗಳು:  ಅಹಮದಾಬಾದ್-ಜೋಧಪುರ, ಅಜ್ನಿ (ನಾಗಪುರ)-ಲೋಕಮಾನ್ಯ ತಿಲಕ್ (ಮುಂಬೈ), ಅಮೃತಸರ-ಲಾಲ್‌ಕೌನ್ (ನೈನಿತಾಲ್), ಬಾಂದ್ರಾ ಟರ್ಮಿನಸ್ (ಮುಂಬೈ)-ರಾಮ್‌ನಗರ್ (ಉತ್ತರಾಖಂಡ) ಹಾಗೂ ಬಾಂದ್ರಾ-ಜೈಸಲ್ಮೇರ್, ಹಜರತ್ ನಿಜಾಮುದ್ದೀನ್-ಮುಂಬೈ ಎಸಿ ಎಕ್ಸ್‌ಪ್ರೆಸ್ (ವಾಯಾ ಭೋಪಾಲ್ ಮತ್ತು ಖಾಂಡ್ವಾ-ಭುಸವಾಲ್) ಬಿಕನೇರ್-ಚೆನ್ನೆ ( ವಾರಕ್ಕೊಮ್ಮೆ ಸಂಚಾರ).

ವೈಷ್ಣೋದೇವಿಗೆ ಇನ್ನಷ್ಟು ಸಂಪರ್ಕ ಕಲ್ಪಿಸಲು ದೆಹಲಿ-ಕತ್ರಾ ಎಸಿ ಎಕ್ಸ್‌ಪ್ರೆಸ್ ಸೇವೆ ಆರಂಭಿಸಲಾಗುತ್ತದೆ. ಇದು ವಾರದಲ್ಲಿ ಆರು ದಿನ ಓಡಾಡುತ್ತದೆ. ಉದಂಪುರಕ್ಕೆ ಸಂಪರ್ಕ ಕಲ್ಪಿಸುವ ಕತ್ರಾ ಮಾರ್ಗದಲ್ಲಿ ಮೇ-ಜೂನ್ ಹೊತ್ತಿಗೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಪುರಿ-ಅಜ್ಮೇರ್ ಎಕ್ಸ್‌ಪ್ರೆಸ್, ಪುರಿ-ಸಾಯಿ ನಗರ್ ಶಿರಡಿ ಎಕ್ಸ್‌ಪ್ರೆಸ್, ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಹಜೂರ್ ಸಾಹೇಬ್‌ಗೆ ಸಂಪರ್ಕ ಕಲ್ಪಿಸುವ ಉನಾ-ನಂಗಲ್‌ಡ್ಯಾಂ (ಹಿಮಾಚಲ ಪ್ರದೇಶ), ಅಹಮದಾಬಾದ್-ಜೋಧಪುರ, ಬಾಂದ್ರಾ- ಹರಿದ್ವಾರ, ಯಶವಂತಪುರ-ಲಖನೌ (ವಾಯಾ ರಾಯ್‌ಬರೇಲಿ ಹಾಗೂ ಪ್ರತಾಪಗಡ)- ಇವು ವಾರಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳು.
ಪ್ರಯಾಣಿಕರ ಪ್ರಮುಖ ರೈಲುಗಳು: ಬಂಟಿಡಾ-ಧುರಿ (ಬಂಜಾಬ್), ಬಿಕನೇರ್-ರತನ್‌ಗಢ (ರಾಜಸ್ತಾನ), ಭಾವ್‌ನಗರ್-ಪಲಿತನಾ (ಗುಜರಾತ್), ಭಾವ್‌ನಗರ್-ಸುರೇಂದ್ರನಗರ್( ಗುಜರಾತ್) ಮತ್ತು ಬರೇಲಿ-ಲಾಲ್‌ಕೌನ್ (ಯುಪಿ).

ಐದು ಮೇನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (ಎಂಇಎಂಯು) ಹಾಗೂ ಎಂಟು ಡಿಸೇಲ್ ಮಲ್ಟಿಪಲ್ ಯುನಿಟ್ (ಡಿಇಎಂಯು) ಕಂಪ್ಯೂಟರ್ ಪ್ಯಾಸೆಂಜರ್ ರೈಲು ಸೇವೆ ಆರಂಭಿಸಲಾಗುವುದು ಎಂದೂ ರೈಲ್ವೆ ಸಚಿವ ಬನ್ಸಲ್ ಹೇಳಿದ್ದಾರೆ.

ಇದಲ್ಲದೇ, ಹೆಚ್ಚುವರಿಯಾಗಿ 57 ರೈಲುಗಳನ್ನು ವಿಸ್ತರಿಸಲಾಗುತ್ತದೆ ಮತ್ತು 24 ರೈಲುಗಳ ಸೇವೆ ಹೆಚ್ಚಿಸಲಾಗುತ್ತದೆ ಎಂದೂ  ತಿಳಿಸಿದ್ದಾರೆ.

ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಸೇವೆ: ತೀರ್ಥ ಯಾತ್ರೆ ಕೈಗೊಳ್ಳುವವರಿಗೆ ಅನುಕೂಲವಾಗಲು ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ರೈಲು ಸೇವೆ ಒದಗಿಸಲು ನಿರ್ಧರಿಸಲಾಗಿದೆ ಎಂದು ಬನ್ಸಲ್ ಹೇಳಿದ್ದಾರೆ.

ರಾಮ ಮಂಡಿ-ಮೌರ್ ಮಂಡಿಗೆ (ವಾಯಾ ತಲವಂಡಿ ಸಾಬೊ-ತಖ್ತ ಶ್ರೀ ಡಂಡಂಸಾಹೇಬ್) ರೈಲು ಮಾರ್ಗ ನಿರ್ಮಿಸುವ ಪ್ರಸ್ತಾವನೆಯನ್ನೂ ಸಚಿವರು ಮುಂದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT