ಮಂಗಳವಾರ, ಅಕ್ಟೋಬರ್ 22, 2019
22 °C

107 ವರ್ಷ ತುಂಬಿದ ಶಾಲೆಯ ಸಾರ್ಥಕ ಸೇವೆ

Published:
Updated:
107 ವರ್ಷ ತುಂಬಿದ ಶಾಲೆಯ ಸಾರ್ಥಕ ಸೇವೆ

ಆಲೂರು: ಪಟ್ಟಣದ ಮುಖ್ಯ ಬೀದಿಯ ಪಕ್ಕದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ.1907ರಲ್ಲಿ ಪ್ರಾರಂಭವಾಗಿರುವ ಶಾಲೆಗೆ ಈಗ 107ವರ್ಷ ತುಂಬಿದೆ. 25 ವರ್ಷಗಳ ಹಿಂದೆ ಶಾಲೆಯಲ್ಲಿ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತ್ದ್ದಿದರು. ಮುಖ್ಯ ಶಿಕ್ಷಕರು ಸೇರಿದಂತೆ 20 ಸಹ ಶಿಕ್ಷಕರು, ಒಬ್ಬ ದೈಹಿಕ ಶಿಕ್ಷಕ ಮತ್ತು ಒಬ್ಬ ಡಿ ಗ್ರೂಪ್ ನೌಕರ ಶಾಲೆಯ್ಲ್ಲಲಿದ್ದರು.ಪ್ರಸಕ್ತ ಶಾಲೆಯಲ್ಲಿ 56 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಕರ್ತವ್ಯ ನಿರ್ವಹಿಸುತಿದ್ದಾರೆ. ಇದಕ್ಕೆ ಖಾಸಗಿ ಶಾಲೆಗಳ ಮತ್ತು ಹೆಚ್ಚುವರಿಯಾಗಿ ಎರಡು ಪ್ರಾಥಮಿಕ ಶಾಲೆಗಳ ಪ್ರಾರಂಭವೇ ಕಾರಣ.ಶಾಲೆಯಲ್ಲಿ ವಿದ್ಯುತ್, ನೀರು, ಶೌಚಾಲಯ ಸೌಲಭ್ಯಗಳಿವೆ. ಆಟದ ಮೈದಾನ ಇದ್ದರೂ ಅಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳು ನಿರ್ಮಾಣವಾಗುತಿದ್ದು, ಮಕ್ಕಳು ಮೈದಾನದಿಂದ ವಂಚಿತರಾಗಿದ್ದಾರೆ.ಶಾಲೆಯ ಗ್ರಂಥಾಲಯದಲ್ಲಿ 3740 ಪುಸ್ತಕಗಳಿವೆ. ಪ್ರತಿ ತಿಂಗಳು ಪೋಷಕರ ಸಭೆ ಕರೆಯಲಾಗುತ್ತದೆ. ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತದೆ. ಮಕ್ಕಳು ಶಾಲೆ ತಪ್ಪಿಸದಂತೆ ಶಿಕ್ಷಕರು ಮತ್ತು ಪೋಷಕರು ಕಾಳಜಿ ವಹಿಸುವುದರಿಂದ ಇಲ್ಲಿಯ ಹಾಜರಾತಿ ಪ್ರತಿದಿನ ನೂರಕ್ಕೆ ನೂರು ಇರುತ್ತದೆ. ಶಾಲೆಯ ಮುಂಭಾಗದ  ಕಾಂಪೌಂಡ್‌ನಲ್ಲಿ  ಕೈತೋಟ ಬೆಳೆಸಿದ್ದಾರೆ. ಸ್ವಚ್ಛ ಓದು, ಶುದ್ಧ ಬರಹ ಮತ್ತು ಎಲ್ಲಾ ಕಲಿಕೆ ವಿಷಯದ ಮೂಲಕ ಕ್ರಿಯೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ.ಶಾಲೆಯಲ್ಲಿ 13 ಕೊಠಡಿಗವೆ. ಅವುಗಳಲ್ಲಿ 4 ಕೊಠಡಿಗಳಲ್ಲಿ ಮಾತ್ರ ಶಾಲೆ ನಡೆಯುತಿದ್ದು, 9 ಕೊಠಡಿಗಳಲ್ಲಿ ಒಂದು ಶಿಕ್ಷಕರ ಸಂಘ, ಇನ್ನೊಂದು ಕೊಠಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪಯೋಗಕ್ಕೆ ಮತ್ತೆ ಉಳಿದ ಕೊಠಡಿಗಳನ್ನು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಬಿಟ್ಟುಕೊಡಲಾಗಿದೆ. ಶಾಲೆಯ ಹಿಂಭಾಗದಲ್ಲಿರುವ ಎರಡು ಕೊಠಡಿಗಳು ಶಿಥಿಲವಾಗಿದ್ದು ದುರಸ್ತಿ ಆಗಬೇಕಾಗಿದೆ.107ವರ್ಷ ತುಂಬಿರ‌್ದುವ ಈ ಶಾಲೆಯ ಎಸ್‌ಡಿಎಂಸಿ ಯವರು, ಮಕ್ಕಳ ಪೋಷಕರು ಮತ್ತು ಶಿಕ್ಷಕರೆಲ್ಲ ಒಟ್ಟಿಗೆ ಸೇರಿ ಶಾಲೆಯ ಶತಮಾನೋತ್ಸವ ಆಚರಿಸಲು ಮುಂದಾಗಬೇಕಾಗಿದೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)