ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ಕ್ಕಿಂತ ಹೆಚ್ಚು ಸಂಗಾತಿಗಳು!

Last Updated 31 ಮೇ 2015, 19:30 IST
ಅಕ್ಷರ ಗಾತ್ರ

ಲಂಡನ್‌ (ಐಎಎನ್‌ಎಸ್‌):  ಹಾರ್ವರ್ಡ್‌ ವಿಶ್ವವಿದ್ಯಾಲಯದ ಶೇ 26 ರಷ್ಟು ವಿದ್ಯಾರ್ಥಿಗಳು 10 ಅಥವಾ  ಅದಕ್ಕಿಂತಲೂ ಹೆಚ್ಚು ಜನ ಲೈಂಗಿಕ ಸಂಗಾತಿಗಳನ್ನು ಹೊಂದಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಶೇ 21ರಷ್ಟು ಹಿರಿಯ ವಿದ್ಯಾರ್ಥಿಗಳು ತಾವು ಇನ್ನೂ ಕನ್ಯೆಯರು ಎಂದು ತಿಳಿಸಿದ್ದಾರೆ.  ಸಮೀಕ್ಷೆಗೆ ಒಳಪಟ್ಟ ಪ್ರತಿ ನಾಲ್ಕು  ಜನರ ಪೈಕಿ ಒಬ್ಬರು ಕಾಲೇಜಿಗೆ ಹೋಗುವ ಸಮಯದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ತಿಳಿಸಿದ್ದಾರೆ.

ಹಾರ್ವರ್ಡ್‌ ವಿ.ವಿಯ  ಪತ್ರಿಕೆಯೊಂದು ಈ  ಸಮೀಕ್ಷೆ  ನಡೆಸಿದ್ದು, ಇದಕ್ಕೆ ‘ಹಾರ್ವರ್ಡ್‌ ಕ್ರಿಮ್ಸನ್‌’ ಎಂದು ತಲೆಬರಹ ಕೊಟ್ಟಿದೆ. ಶೇ 60ರಷ್ಟು ವಿದ್ಯಾರ್ಥಿಗಳು ವಾರದಲ್ಲಿ ಒಂದು ದಿನ ಮದ್ಯಪಾನ ಮಾಡುವುದಾಗಿ ಹೇಳಿದರೆ, ಶೇ 40ರಷ್ಟು ವಿದ್ಯಾರ್ಥಿಗಳು ವಾರದಲ್ಲಿ ಒಂದು ಬಾರಿ ಧೂಮಪಾನ ಮಾಡುವುದಾಗಿ ತಿಳಿಸಿದ್ದಾರೆ. ಹಾರ್ವರ್ಡ್‌ ವಿ.ವಿ ಪದವಿ ತರಗತಿಯ ಅರ್ಧದಷ್ಟು ಅಂದರೆ ಸುಮಾರು 760 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT