ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ನೇ ವಯಸ್ಸಿಗೆ ಬಿ.ಎಸ್ಸಿ. ಓದುವ ಜಾಣೆ!

Last Updated 30 ಡಿಸೆಂಬರ್ 2010, 11:25 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಪ್ರಚಂಡ ಬುದ್ಧಿಶಾಲಿಯಾದ 10 ವರ್ಷ ವಯಸ್ಸಿನ ಜಾಣೆಯೊಬ್ಬಳಿಗೆ ಲಖನೌ ವಿಶ್ವವಿದ್ಯಾಲಯವು ವಿಜ್ಞಾನ ವಿಷಯ (ಬಿ.ಎಸ್ಸಿ.)ದ ಕಲಿಕೆಗೆ ಅನುಮತಿ ನೀಡಿದೆ.

ಬಾಲಕಿ ಸುಷ್ಮಾ ವರ್ಮಾಗೆ ಇಲ್ಲಿನ ಸಿಎಂಎಸ್ ಪದವಿ ಕಾಲೇಜಿನಲ್ಲಿ  ಬಿ.ಎಸ್ಸಿ. ಕಲಿಯಲು ವಿವಿಯ ಪ್ರವೇಶಾತಿ ಸಮಿತಿಯು ತಾತ್ಕಾಲಿಕ ಒಪ್ಪಿಗೆ ನೀಡಿದೆ.ಸುಷ್ಮಾಳ ಅಣ್ಣ ಶೈಲೇಂದ್ರ, ತನ್ನ 14ನೇ ವಯಸ್ಸಿನಲ್ಲೇ (2007ರಲ್ಲಿ) ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಪದವಿ ಗಳಿಸಿ ದಾಖಲೆ ಮಾಡಿದ್ದ. ಇವರಿಬ್ಬರು ತಮ್ಮ ಏಳನೇ ವಯಸ್ಸಿನಲ್ಲೇ ಪ್ರೌಢ ಶಾಲಾ ಶಿಕ್ಷಣ ಪೂರೈಸಿದ್ದು ಇವರ ತಂದೆ ತೇಜ್ ಬಹದ್ದೂರ್ ದಿನಗೂಲಿ ನೌಕರರಾಗಿದ್ದು, ತಾಯಿ ಛಾಯಾ ದೇವಿ ಅನಕ್ಷರಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT