11 ಗ್ರಾಮ ದೇವತೆಗಳ ಅದ್ದೂರಿ ಮೆರವಣಿಗೆ

7

11 ಗ್ರಾಮ ದೇವತೆಗಳ ಅದ್ದೂರಿ ಮೆರವಣಿಗೆ

Published:
Updated:

ಕೃಷ್ಣರಾಜಪುರ: ವಿಜಯ ದಶಮಿ ಪ್ರಯುಕ್ತ ಭೋವಿ ಜನಾಂಗದ ವತಿಯಿಂದ ರಾಮಮೂರ್ತಿನಗರದಲ್ಲಿ ಗುರುವಾರ 11 ಗ್ರಾಮ ದೇವತೆಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.ನಾಡಿನ ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳು, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕಂಸಾಳೆ, ತಂಜಾವೂರಿನ ಕವಾಡಿ ಕುಣಿತ, ಕೇರಳ ವಾದ್ಯ, ಮಂಗಳವಾದ್ಯ ಜನರ ಗಮನ ಸೆಳೆಯಿತು.ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ರಾಮಮೂರ್ತಿನಗರ ಮುಖ್ಯರಸ್ತೆ, ಚನ್ನಸಂದ್ರ ಸೇತುವೆ, ಶಾಂತಿನಗರ ಬಡಾವಣೆ, ಅಂಬೇಡ್ಕರ್‌ನಗರ ಮೂಲಕ ಮುನೇಶ್ವರ ನಗರ ತಲುಪಿತು.

ಭೋವಿ ಗುರುದೇವ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry