ಗುರುವಾರ , ಅಕ್ಟೋಬರ್ 24, 2019
21 °C

11 ತಿಂಗಳ ಹಸುಳೆಗೆ ಕರುಳಿನ ತೊಂದರೆ

Published:
Updated:
11 ತಿಂಗಳ ಹಸುಳೆಗೆ ಕರುಳಿನ ತೊಂದರೆ

ಶಿರಸಿ: ನೆಲಕ್ಕೆ ತೆವಳಿ ಅಂಬೆ ಹರೆದು ಹೋಗಬೇಕಿದ್ದ ಹಸುಳೆಯೊಂದು ಚಿಕಿತ್ಸೆಯ ಕೊರತೆಯಿಂದ ಪಾಲಕರ ತೊಡೆಯೇರಿ ದಿನ ಕಳೆಯ ಬೇಕಾದ ಪರಿಸ್ಥಿತಿ ಎದುರಿಸುತ್ತಿದೆ. ಇಲ್ಲಿನ ಮರಾಠಿಕೊಪ್ಪದ ನಿವಾಸಿಗಳಾದ ವೆಂಕಟರಮಣ ಪಟಗಾರ ಮತ್ತು ಕವಿತಾ ದಂಪತಿ ಪುತ್ರ 11 ತಿಂಗಳ ಹಸುಳೆ ಪ್ರೀತಮ್‌ಗೆ ತುರ್ತು ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು ಪಾಲಕರು ಹಣಕಾಸಿನ ಅನಾನುಕೂಲತೆಯಿಂದ ಕೈ ಚೆಲ್ಲಿ ಕುಳಿತಿದ್ದಾರೆ.ಹುಟ್ಟಿನಿಂದಲೇ ಬಂದ ಕರುಳಿನ ತೊಂದರೆಯಿಂದ ಬಳಲುತ್ತಿದ್ದ ಮಗುವಿಗೆ ಎರಡನೇ ತಿಂಗಳಿನಲ್ಲಿ ತೊಂದರೆ ಕಾಣಿಸಿಕೊಂಡಿತು. ವೈದ್ಯರ ಬಳಿ ತೋರಿಸಿದಾಗ ಕರುಳಿನಲ್ಲಿ ತೊಂದರೆ ಇರುವ ಅಂಶ ಗಮನಕ್ಕೆ ಬಂತು. ಇದಕ್ಕೆ ಸಂಬಂಧಿಸಿ ಶಿರಸಿ ಮಹಾಲಕ್ಷ್ಮೀ ಆಸ್ಪತ್ರೆಯಲ್ಲಿ ಮಗುವಿಗೆ ಕೊಲಾಸ್ಟಮಿ ಸರ್ಜರಿ ನಡೆಸಲಾ ಯಿತು.ಪುಟ್ಟ ಹಸುಳೆಯಾದ್ದರಿಂದ ಶಸ್ತ್ರಚಿಕಿತ್ಸೆ ನಂತರ ಕರುಳನ್ನು ದೇಹದ ಹೊರಕ್ಕೆ ಇಡಲಾಗಿದೆ. ಮಗುವಿನ ತೂಕ ಹೆಚ್ಚಳವಾದ ನಂತರ ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಿ ಕರುಳನ್ನು ದೇಹದ ಒಳಗೆ ಸೇರಿಸಬೇಕು ಎಂದು ವೈದ್ಯರು ಆಗಲೇ ಸೂಚಿ ಸಿದ್ದರು.ಈಗ ಮಗುವಿನ ತೂಕ ಹೆಚ್ಚಳವಾ ಗಿದ್ದು, ಶಸ್ತ್ರಚಿಕಿತ್ಸೆಗೆ ಪೂರಕವಾಗಿದೆ. ಆದರೆ ಕೂಲಿ ಕೆಲಸದಿಂದ ಜೀವನ ಸಾಗಿಸುವ ವೆಂಕಟರಮಣ ಕುಟುಂಬಕ್ಕೆ ಹಣವಿಲ್ಲದೆ ಶಸ್ತ್ರಚಿಕಿತ್ಸೆ ಮುಂದೂ ಡುವ ಅನಿವಾರ್ಯತೆ ಬಂದಿದೆ.`ಈಗಾಗಲೇ ಮಗುವಿಗೆ ರೂ.50 ಸಾವಿರದಷ್ಟು ಖರ್ಚು ಮಾಡಿದ್ದೇವೆ. ಇನ್ನೂ ರೂ.30 ಸಾವಿರದಷ್ಟು ಹಣ ಅಗತ್ಯವಾಗಿದೆ. ದಾನಿಗಳು ನೆರವು ನೀಡಿ ಮಗುವಿನ ಜೀವನ ರಕ್ಷಣೆ ಮಾಡಬೇಕು. ಪಡಿತರ ಚೀಟಿ ಸಹ ಇಲ್ಲದ ಕಾರಣ ಸರ್ಕಾರಿ ಸೌಲಭ್ಯ ದಿಂದ ಸಹ ವಂಚಿತವಾಗುವಂತಾಗಿದೆ. ದಾನಿಗಳು ಕವಿತಾ ಪಟಗಾರ ಹೆಸರಿ ನಲ್ಲಿ ಸಿಂಡಿಕೇಟ್ ಬ್ಯಾಂಕ್ ನಗರಸಭೆ ಶಾಖೆಯಲ್ಲಿರುವ ಉಳಿತಾಯ ಖಾತೆ ಸಂಖ್ಯೆ 03572200037232ಕ್ಕೆ ನೆರವು ನೀಡಬೇಕು~ ಎಂದು ವೆಂಕಟ ರಮಣ ಪಟಗಾರ ವಿನಂತಿಸಿದ್ದಾರೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)