ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಕ್ಷೇತ್ರಕ್ಕೆ ವಿಶ್ವಕರ್ಮ ಸಮಿತಿ ಅಭ್ಯರ್ಥಿ'

Last Updated 8 ಏಪ್ರಿಲ್ 2013, 10:17 IST
ಅಕ್ಷರ ಗಾತ್ರ

ರಾಯಚೂರು: ವಿಶ್ವಕರ್ಮ ಸಮಾಜದ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ನಿರ್ಲಕ್ಷಿಸಿವೆ ಈ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕ  ವಿಶ್ವಕರ್ಮ ಅಭಿವೃದ್ಧಿ ಸಮಿತಿಯಿಂದ 14 ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ವೀರೇಂದ್ರ ಇನಾಂದಾರ ಅವರು ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ವಕೀಲರಾದ ಬ್ರಹ್ಮಗಣೇಶ, ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಚಿನ್ಮಯಾಚಾರ್ಯ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.

ರಾಯಚೂರು ನಗರ ಕ್ಷೇತ್ರದಲ್ಲಿ 12,000, ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ 18,000 ಜನ ವಿಶ್ವಕರ್ಮರಿದ್ದಾರೆ. ಇದೇ ರೀತಿ ಸೇಡಂ, ಗುರಮಠಕಲ್, ಬೀದರ್, ಬಿಜಾಪುರ ಜಿಲ್ಲೆಯಲ್ಲೂ ವಿಶ್ವಕರ್ಮ ಸಮಾಜ ಬಾಂಧವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ. 21 ವಿಷಯ ಪ್ರಣಾಳಿಕೆಯನ್ನೂ ಮಾಡಲಾಗಿದೆ. ಅವುಗಳ ಆಧಾರದ ಮೇಲೆ ಸಮಾಜದಿಂದ ಪಕ್ಷೇತರರಾಗಿ ಸ್ಪರ್ಧಿಸಿದವರು ಮತದಾರರಿಗೆ ಮತ ಯಾಚನೆ ಮಾಡಲಿದ್ದಾರೆ ಎಂದರು.

ರಾಜ್ಯದ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗೆಲುವಿಗೆ ವಿಶ್ವಕರ್ಮ ಸಮಾಜವು ನಿರ್ಣಾಯಕ ಪಾತ್ರವನ್ನು ವಹಿಸಿದೆ. ಆದರೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆಪಾದಿಸಿದರು.

ರಾಜಕೀಯ ಪಕ್ಷಗಳು ವಿಶ್ವಕರ್ಮ ಸಮಾಜವನ್ನು ಕೇವಲ ಮತ ಬಳಕೆಗೆ ಮಾತ್ರ ಉಪಯೋಗ ಮಾಡಿಕೊಳ್ಳುತ್ತಿವೆ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡಲಾಗಿದೆ. ಆದರೆ, ಸಮಾಜದ ಹಿತದೃಷ್ಟಿಯಿಂದ ಹೋರಾಟ ಮಾಡಿದಾಗಲೂ ಸ್ಪಂದಿಸಿಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ರಾಜಕೀಯ ಪಕ್ಷಗಳ ಮೇಲೆ ವಿಶ್ವಾಸ ಕಡಿಮೆಯಾಗಿದೆ. ಸಮಾಜವನ್ನು ಕಡಗಣಿಸುತ್ತಲೇ ಬರಲಾಗಿದೆ. ಸಮಾಜ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ನಡೆಸಿದ ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿಲ್ಲ. ಈಚೆಗೆ ನಡೆದ ನಗರಸಭೆ ಚುನಾವಣೆಯಲ್ಲೂ ಯಾವ ಪಕ್ಷಗಳೂ ಟಿಕೆಟ್ ಕೊಡಲಿಲ್ಲ. ಸಮಯ ಸಂದರ್ಭಕ್ಕನುಸಾರ ವಿಶ್ವಕರ್ಮ ಸಮಾಜವನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ನಮ್ಮ ಕುಲಕಸುಬು ಉಳಿಸಿಕೊಳ್ಳಬೇಕಾದರೆ ರಾಜಕೀಯ ಪ್ರವೇಶ ಅನಿವಾರ್ಯ. ನಮ್ಮ ಸಮಾಜದಂತೆಯೇ ನೋವು ಅನುಭವಿಸುವ ಹಿಂದುಳಿದ ವರ್ಗದ 30-40 ಸಮಾಜದವರು ಸೇರಿ ಸಭೆ ನಡೆಸಿ ಚುನಾವಣೆಗೆ ಧುಮುಕುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶೇ 70ರಷ್ಟು ಹಿಂದುಳಿದ ವರ್ಗದ ಮತದಾರರಿದ್ದಾರೆ. ಇದರಲ್ಲಿ ಶೇ 40 ಜಾತಿ ಸಮುದಾಯದವರು ಸೇರಿ ಈ ಚುನಾವಣೆ ಎದುರಿಸಿ ನಮ್ಮ ರಕ್ಷಣೆಗೆ ಮುಂದಾಗುತ್ತಿದ್ದೇವೆ.  ಈ ಚುನಾವಣೆಯಲ್ಲಿ ವಿಶ್ವಕರ್ಮ ಸಮಾಜವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಯಾವುದೇ ಕ್ಷೇತ್ರದಲ್ಲಿ ಬಹುತೇಕ ಅಭ್ಯರ್ಥಿ ಗೆಲ್ಲುವುದು 3-4 ಸಾವಿರ ಮತಗಳಲ್ಲಿ. ವಿಶ್ವಕರ್ಮ ಸಮಾಜ ಬಾಂಧವರು ತಮ್ಮ ಸಮಾಜದ ಅಭ್ಯರ್ಥಿಗೆ ಮತ ಹಾಕಿದರೆ ಗೆಲ್ಲಬೇಕಾದ ಅಭ್ಯರ್ಥಿ ಸೋಲುವಂತಾಗುತ್ತದೆ.

ಈ ತಂತ್ರ ವ್ಯವಸ್ಥಿತ ರೀತಿಯಲ್ಲಿ ಸಮಾಜ ಮಾಡುತ್ತಿದೆ. ಅಷ್ಟೇ ಅಲ್ಲ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಫಾರಂ ಸಂಖ್ಯೆ 17 ಭರ್ತಿ ಮಾಡಿ ತಟಸ್ಥ ಮತದಾನಕ್ಕೂ ಪ್ರಯತ್ನ ಮಾಡಲೂ ಸಮಾಜವು ಸಮಾಜ ಬಾಂಧವರಿಗೆ ಮನವಿ ಮಾಡಿದೆ ಎಂದು ಹೇಳಿದರು.

ರಾಯಚೂರು ನಗರ ಕ್ಷೇತ್ರ ಅಭ್ಯರ್ಥಿ ಬ್ರಹ್ಮಗಣೇಶ, ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT