ಶುಕ್ರವಾರ, ಜೂನ್ 25, 2021
30 °C

112 ಗ್ರಾ.ಪಂ.ಗಳು ನಿರ್ಮಲ ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ರಾಜ್ಯದ 112 ಗ್ರಾಮ ಪಂಚಾಯಿತಿಗಳು `ನಿರ್ಮಲ ಗ್ರಾಮ~ ಪುರಸ್ಕಾರಕ್ಕೆ ಪಾತ್ರವಾಗಿವೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ ಪ್ರಕಟಿಸಿದರು.ತಾಲ್ಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಗುರುವಾರ ಕರ್ನಾಟಕ ನಾಗರೀಕ ಸೇವಾ ಖಾತರಿ ಸೌಲಭ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 112 ಗ್ರಾ.ಪಂ.ಗಳ ಪೈಕಿ ಧಾರವಾಡ ಜಿಲ್ಲೆಯ 12 ಗ್ರಾ.ಪಂ.ಗಳು ಪ್ರಶಸ್ತಿ ಪಡೆದಿವೆ ಎಂದು ತಿಳಿಸಿದರು.`ಜಿಲ್ಲೆಯ ಬೇಲೂರು, ಮಂಡಿಹಾಳ, ಮುಮ್ಮಿಗಟ್ಟಿ, ಶಿವಳ್ಳಿ, ಛಬ್ಬಿ, ಕಟ್ನೂರು, ವರೂರು, ಜಿನ್ನೂರು, ತಂಬೂರು, ಹಿರೇಹರಕಣಿ, ಯಲಿವಾಳ ಮತ್ತು ಹೆಬ್ಬಾಳ ಗ್ರಾ.ಪಂ.ಗಳು ಈ ಪುರಸ್ಕಾರಕ್ಕೆ ಒಳಗಾಗಿವೆ~ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಡಿವೆಪ್ಪ ಮನಮಿ ಮಾತನಾಡಿ ಈ ಕಾಯ್ದೆಯನ್ನು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಒಂದಾಗಿ ಧಾರವಾಡ ಜಿಲ್ಲೆಯನ್ನು ಪರಿಗಣಿಸಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದಕ್ಕೆ ರಾಜ್ಯ ಸರ್ಕಾರವನ್ನು ಅಭಿನಂದಿಸಿದರು.ಕಾಯ್ದೆ ಅನುಷ್ಠಾನದ ಆರಂಭದಲ್ಲಿ ಸಾಧಕ-ಬಾಧಕಗಳು ಇದ್ದೇ ಇರುತ್ತವೆ. ಅವುಗಳನ್ನು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.ಜನಸಾಮಾನ್ಯರಿಗೆ ಅಗತ್ಯ ಸೇವೆಗಳನ್ನು ತ್ವರಿತವಾಗಿ ಒದಗಿಸುವ ಉದ್ದೇಶದ ಸೇವಾ ಖಾತರಿ ಕಾಯ್ದೆ ಅನುಷ್ಠಾನಕ್ಕೆ ಕ್ರಿಯಾತ್ಮಕವಾಗಿ ಅಧಿಕಾರಿಗಳು ಸ್ಪಂದಿಸಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕಿ ಸೀಮಾ ಮಸೂತಿ ಹೇಳಿದರು.ಪ್ರತಿಯೊಂದು ಸಮಸ್ಯೆಗೆ ಪರಿಹಾರ ಖಂಡಿತವಾಗಿ ಇರುತ್ತದೆ. ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಜಿಲ್ಲಾಧಿಕಾರಿ ದರ್ಪಣ ಜೈನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರೇಮಾ ಕೋಮಾರ ದೇಸಾಯಿ, ಕಸ್ತೂರಿ ಅಷ್ಟಗಿ, ತಾ.ಪಂ. ಅಧ್ಯಕ್ಷ ಯೋಗೀಶಗೌಡ, ಉಪ್ಪಿನಬೆಟಗೇರಿ ಗಾ.ಪಂ. ಅಧ್ಯಕ್ಷ ಕಮಾಲ್‌ಸಾಹೇಬ್ ಸನದಿ, ಉಪಾಧ್ಯಕ್ಷೆ  ವಸಂತಾ ಜವಳಿಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು.ಉಪವಿಭಾಗಾಧಿಕಾರಿ ಶಿವಾನಂದ ಕಾಪ್ಸೆ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಸ್.ಬಿ. ಮುಳ್ಳೊಳಿ ತಹಶೀಲ್ದಾರ ರವೀಂದ್ರ ಕರಿಲಿಂಗಣ್ಣನವರ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.