ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11ರಿಂದ ಮುಷ್ಕರ ತೀವ್ರ

ಲಾರಿ ಮಾಲೀಕರ ಸಂಘಟನೆಗಳ ಎಚ್ಚರಿಕೆ
Last Updated 3 ಜನವರಿ 2014, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಷ್ಕರ ನಿರತ ಮರಳು ಸಾಗಣೆ ಲಾರಿ ಮಾಲೀಕರನ್ನು ಮಾತು­ಕತೆಗೆ ಕರೆದು, ಅವರ ಸಮಸ್ಯೆಯನ್ನು ಕೂಡಲೇ ಬಗೆ­ಹರಿಸಬೇಕು. ಇಲ್ಲದಿದ್ದರೆ ಈ ತಿಂಗಳ 11ರ ಮಧ್ಯರಾತ್ರಿಯಿಂದ ಎಲ್ಲ ಸರಕು ಸಾಗಣೆ ಮತ್ತು ಪ್ರವಾಸಿ ವಾಹನ­ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತ­ಗೊಳಿಸಿ ಪ್ರತಿಭಟನೆಯನ್ನು ತೀವ್ರ­ಗೊಳಿಸ­ಲಾ­ಗುವುದು’ ಎಂದು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌.­ಷಣ್ಮುಗಪ್ಪ ಅವರು ಶುಕ್ರವಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

‘ದಕ್ಷಿಣ ವಲಯ ಮೋಟಾರು ಟ್ರಾನ್ಸ್‌­ಪೋರ್ಟ್‌ ವೆಲ್‌ಫೇರ್‌ ಅಸೋ­ಸಿ­ಯೇಷನ್’ನ ತುರ್ತು ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾ­ಡಿದ ಅವರು, ‘ಸಂಪೂರ್ಣ ಮುಷ್ಕರಕ್ಕೆ ನೆರೆ ರಾಜ್ಯಗಳ ವಾಹನ ಮಾಲೀಕರ ಸಂಘ­ಟನೆಗಳು ಒಕ್ಕೊರಲಿ­­­ನಿಂದ ಬೆಂಬಲ ವ್ಯಕ್ತಪಡಿಸಿವೆ’ ಎಂದರು.

‘ಮರಳು ಲಾರಿ ಮುಷ್ಕರವನ್ನು ಬೆಂಬ­ಲಿಸಿ ಪೆಟ್ರೋಲ್‌, ಡೀಸೆಲ್‌, ಅನಿಲ ಸಾಗಣೆ ವಾಹನಗಳು ಸೇರಿ­ದಂತೆ ಎಲ್ಲ ಬಗೆಯ ಸರಕು ಸಾಗಣೆ ವಾಹನಗಳು, ಪ್ರವಾಸಿ ವಾಹನಗಳು, ಕ್ಯಾಬ್‌ಗಳು ಮೊದಲಾದ ಐದು ಲಕ್ಷಕ್ಕೂ ಹೆಚ್ಚು ವಾಹನಗಳು  ರಾಜ್ಯ­ದಲ್ಲಿ 11ರ ಮಧ್ಯ­ರಾತ್ರಿಯಿಂದ ಸಂಚ­ರಿಸು­ವುದಿಲ್ಲ. ರಾಜ್ಯ­ದೊಳಗೆ  ಹೊರ ರಾಜ್ಯಗಳ ವಾಹನ­ಗಳೂ ಬರುವು­ದಿಲ್ಲ. ಇದರಿಂದಾಗುವ ಕಷ್ಟನಷ್ಟಗಳಿಗೆ ಸರ್ಕಾರವೇ ಹೊಣೆ’ ಎಂದು ಅವರು ಹೇಳಿದರು.

‘ಆಸ್ಪತ್ರೆ ವಾಹನಗಳ ಸಂಚಾರ ಮತ್ತು ಕೃಷಿ ಉತ್ಪನ್ನಗಳ ಸಾಗಣೆಗೆ ಮುಷ್ಕರ­ದಿಂದ ವಿನಾಯಿತಿ ನೀಡಿ­ದ್ದೇವೆ. ಆದರೆ ರೈತರೇ ಸ್ವಯಂ ಪ್ರೇರಣೆ­ಯಿಂದ ನಮ್ಮ ಹೋರಾಟಕ್ಕೆ ಬೆಂಬಲ ನೀಡಲು ಮುಂದೆ ಬಂದಿ­ದ್ದಾರೆ’ ಎಂದು ಅವರು ತಿಳಿಸಿದರು.
‘ಮರಳು ಲಾರಿ ಮುಷ್ಕರವನ್ನು ದಿಢೀರ್‌ ಆಗಿ ಆರಂಭಿಸಿಲ್ಲ. ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸ­ಲಿಲ್ಲ. ಅನಿವಾರ್ಯವಾಗಿ ಮುಷ್ಕರ ಪ್ರಾರಂಭಿಸಬೇಕಾಯಿತು. 14 ದಿನ­ಗಳಿಂದ ಮುಷ್ಕರ ನಡೆಸು­ತ್ತಿದ್ದರೂ ಸರ್ಕಾರ ಯಾವ ಕ್ರಮ­ವನ್ನೂ ಕೈಗೊಂಡಿಲ್ಲ’ ಎಂದು ಅವರು ದೂರಿದರು.

‘ಮರಳು ಲಾರಿ ಮುಷ್ಕರದಿಂದ ಸುಮಾರು ₨ 500 ಕೋಟಿ ಮೊತ್ತದ ನಿರ್ಮಾಣ ಚಟುವಟಿಕೆಗಳು ಸ್ಥಗಿತ­ಗೊಂಡಿವೆ. 30 ಸಾವಿರ ಲಾರಿಗಳ  ಮಾಲೀಕರು ನಷ್ಟ ಅನುಭವಿಸುತ್ತಿ­ದ್ದಾರೆ. 2 ಲಕ್ಷ ಮಂದಿ ಸರಕು ಸಾಗಣೆ ಕೂಲಿ ಕಾರ್ಮಿಕರು, 4 ಲಕ್ಷ ಕಟ್ಟಡ ಕೂಲಿ ಕಾರ್ಮಿಕರು ಕೆಲಸ ಇಲ್ಲದೇ ಪರದಾಡುವಂತಾಗಿದೆ’ ಎಂದು ಅವರು ತಿಳಿಸಿದರು.

‘ಮುಷ್ಕರದ ಬಗ್ಗೆ ಸರ್ಕಾರದ ಗಮನ ಸೆಳೆಯಲು 2–3 ದಿನಗಳಲ್ಲಿ ವಿಧಾನಸೌಧ ಚಲೋ ಚಳವಳಿ ನಡೆಸಲಾಗುವುದು’ ಎಂದರು.
‘ಪೊಲೀಸ್‌, ಆರ್‌ಟಿಒ, ಲೋಕೋಪ­ಯೋಗಿ, ಗಣಿ ಮತ್ತು ಭೂಗರ್ಭವಿಜ್ಞಾನ ಇಲಾಖೆಗಳ ಅಧಿಕಾರಿಗಳು ಕಿ.ಮೀ.ಗೊಬ್ಬರಂತೆ ನಿಂತು ಲಾರಿ ಸವಾರರಿಂದ ಲಂಚ ಪಡೆಯುತ್ತಿದ್ದಾರೆ. ಹೆದ್ದಾರಿಗಳಲ್ಲಿ ರಸ್ತೆ ಬಳಕೆ ಶುಲ್ಕ  (ಟೋಲ್‌) ಸಂಗ್ರಹದ ಹೆಸರಿನಲ್ಲಿ ದರೋಡೆ ನಡೆಯುತ್ತಿದೆ. ಇದೆಲ್ಲವನ್ನು ನಿಲ್ಲಿಸ­ಬೇಕು’ ಎಂದು ಆಗ್ರಹಿಸಿದರು.

‘ಚಾಲನಾ ಪರವಾನಗಿ ಪಡೆ­ಯಲು ಕನಿಷ್ಠ ವಿದ್ಯಾರ್ಹತೆ ಎಂಟನೇ ತರಗತಿ ಉತ್ತೀರ್ಣರಾಗಿರಬೇಕು ಎಂಬ ನಿಯಮಕ್ಕೆ ಕನಿಷ್ಠ 3 ವರ್ಷಗಳ ಕಾಲ ತಡೆ ನೀಡಬೇಕು. ದೇಶವ­ನ್ನಾಳುವ ಶಾಸಕರು, ಸಂಸದರಿಗೇ ಇಲ್ಲದ ಕನಿಷ್ಠ ವಿದ್ಯಾರ್ಹತೆಯ ನಿಯಮ ಚಾಲಕರಿಗೇ ಏಕೆ ಬೇಕು’ ಎಂದು ಅವರು ಪ್ರಶ್ನಿಸಿದರು.

‘ಮರಳು ಲಾರಿ ಮುಷ್ಕರವನ್ನು ದಿಢೀರ್‌ ಆಗಿ ಆರಂಭಿಸಿಲ್ಲ. ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸ­ಲಿಲ್ಲ. ಅನಿವಾರ್ಯವಾಗಿ ಮುಷ್ಕರ ಪ್ರಾರಂಭಿಸಬೇಕಾಯಿತು. 14 ದಿನ­ಗಳಿಂದ ಮುಷ್ಕರ ನಡೆಸು­ತ್ತಿದ್ದರೂ ಸರ್ಕಾರ ಯಾವ ಕ್ರಮ­ವನ್ನೂ ಕೈಗೊಂಡಿಲ್ಲ’ ಎಂದು ಅವರು ದೂರಿದರು.

‘ಮರಳು ಲಾರಿ ಮುಷ್ಕರದಿಂದ ಸುಮಾರು ₨500 ಕೋಟಿ ಮೊತ್ತದ ನಿರ್ಮಾಣ ಚಟುವಟಿಕೆಗಳು ಸ್ಥಗಿತ­ಗೊಂಡಿವೆ. 30 ಸಾವಿರ ಲಾರಿಗಳ  ಮಾಲೀಕರು ನಷ್ಟ ಅನುಭವಿಸುತ್ತಿ­ದ್ದಾರೆ. 2 ಲಕ್ಷ ಮಂದಿ ಸರಕು ಸಾಗಣೆ ಕೂಲಿ ಕಾರ್ಮಿಕರು, 4 ಲಕ್ಷ ಕಟ್ಟಡ ಕೂಲಿ ಕಾರ್ಮಿಕರು ಕೆಲಸ ಇಲ್ಲದೇ ಪರದಾಡು­ವಂತಾಗಿದೆ’ ಎಂದು ಅವರು ತಿಳಿಸಿದರು.

‘ಮುಷ್ಕರದ ಬಗ್ಗೆ ಸರ್ಕಾರದ ಗಮನ ಸೆಳೆಯಲು 2–3 ದಿನಗಳಲ್ಲಿ ವಿಧಾನಸೌಧ ಚಲೋ ಚಳವಳಿ ನಡೆಸಲಾಗುವುದು’ ಎಂದರು.
‘ಪೊಲೀಸ್‌, ಆರ್‌ಟಿಒ, ಲೋಕೋಪ­ಯೋಗಿ, ಗಣಿ ಮತ್ತು ಭೂಗರ್ಭವಿಜ್ಞಾನ ಇಲಾಖೆಗಳ ಅಧಿಕಾರಿಗಳು ಕಿ.ಮೀ.ಗೊಬ್ಬರಂತೆ ನಿಂತು ಲಾರಿ ಸವಾರರಿಂದ ಲಂಚ ಪಡೆಯುತ್ತಿದ್ದಾರೆ. ಹೆದ್ದಾರಿಗಳಲ್ಲಿ ರಸ್ತೆ ಬಳಕೆ ಶುಲ್ಕ  (ಟೋಲ್‌) ಸಂಗ್ರಹದ ಹೆಸರಿನಲ್ಲಿ ದರೋಡೆ ನಡೆಯುತ್ತಿದೆ. ಇದೆಲ್ಲವನ್ನು ನಿಲ್ಲಿಸ­ಬೇಕು’ ಎಂದು ಆಗ್ರಹಿಸಿದರು.

‘ಚಾಲನಾ ಪರವಾನಗಿ ಪಡೆ­ಯಲು ಕನಿಷ್ಠ ವಿದ್ಯಾರ್ಹತೆ ಎಂಟನೇ ತರಗತಿ ಉತ್ತೀರ್ಣರಾಗಿರಬೇಕು ಎಂಬ ನಿಯಮಕ್ಕೆ ಕನಿಷ್ಠ 3 ವರ್ಷಗಳ ಕಾಲ ತಡೆ ನೀಡಬೇಕು. ದೇಶವ­ನ್ನಾಳುವ ಶಾಸಕರು, ಸಂಸದರಿಗೇ ಇಲ್ಲದ ಕನಿಷ್ಠ ವಿದ್ಯಾರ್ಹತೆಯ ನಿಯಮ ಚಾಲಕರಿಗೇ ಏಕೆ ಬೇಕು’ ಎಂದು ಅವರು ಪ್ರಶ್ನಿಸಿದರು.

ಮುಷ್ಕರಕ್ಕೆ ಭಾರಿ ಬೆಂಬಲ
ಅಖಿಲ ಭಾರತ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ ಮತ್ತು ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಕೆ.ಜಿ.ರವೀಂದ್ರ, ಕರ್ನಾಟಕ ಟೂರಿಸ್ಟ್‌ ಮೋಟಾರ್‌ ಕ್ಯಾಬ್‌ ಮ್ಯಾಕ್ಸಿ ಕ್ಯಾಬ್‌ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯ, ತಮಿಳುನಾಡು ಲಾರಿ ಮಾಲೀಕರ ಸಂಘದ ವೇಲು, ಆಂಧ್ರಪ್ರದೇಶ ಲಾರಿ ಮಾಲೀಕರ ಸಂಘದ ಗೋಪಾಲ್‌ ನಾಯ್ಡು, ಕರ್ನಾಟಕ ರಿಗ್‌ ಓನರ್ಸ್‌ ಅಸೋಸಿಯೇಷನ್‌ನ ಎನ್‌.ಟಿ.ಅರಸು ಮೊದಲಾದವರು ಮಾತನಾಡಿ, ‘ಮರಳು ಲಾರಿ ಮುಷ್ಕರವನ್ನು ನಾವೆಲ್ಲರೂ ಬೆಂಬಲಿಸುತ್ತಿದ್ದೇವೆ’ ಎಂದು ಘೋಷಿಸಿದರು.

‘ಎಸ್ಮಾ ಪ್ರಯೋಗಿಸಲಿ, ಜೈಲಿಗೆ ಹಾಕಲಿ, ಮುಷ್ಕರದಿಂದ  ನಾವು ಹಿಂದೆ ಸರಿಯುವುದಿಲ್ಲ’ ಎಂದು ರವೀಂದ್ರ ಹೇಳಿದರು.
‘ಪೆಟ್ರೋಲ್‌, ಡೀಸೆಲ್‌ ಪೂರೈಕೆಯೇ ಸ್ಥಗಿತಗೊಳ್ಳುವುದರಿಂದ ನಮ್ಮ ಟ್ಯಾಕ್ಸಿ­ಗಳನ್ನು ಓಡಿಸಲು ಸಾಧ್ಯವಾಗದು. ಅಲ್ಲದೇ ಪ್ರಯಾಣಿಕರ ಹಿತದೃಷ್ಟಿಯಿಂದಲೂ  ಜ. 11ರ ರಾತ್ರಿಯಿಂದ ನಾವು ವಾಹನಗಳನ್ನು ಓಡಿಸುವುದಿಲ್ಲ’ ಎಂದು ಭೈರವ ಸಿದ್ದರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT